ಚಿಕ್ಕಬಳ್ಳಾಪುರ:ಎಸಿಬಿ ಅಧಿಕಾರಿಗಳ ಎದುರೇ ಗ್ರಾಮಪಂಚಾಯತಿ ಅಧಿಕಾರಿಗಳಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಚಿಂತಾಮಣಿ ತಾಲೂಕಿನ ಉಪ್ಪರಪೇಟೆಯಲ್ಲಿ ನಡೆಯಿತು.
ಎಸಿಬಿ ಅಧಿಕಾರಿಗಳ ಎದುರೇ ಪಿಡಿಓಗಳಿಗೆ ಗ್ರಾಮಸ್ಥರ ತರಾಟೆ - ತರಾಟೆ
ಎಸಿಬಿ ಅಧಿಕಾರಿ ಶಿವಮಲ್ಲಯ್ಯ ಅಧ್ಯಕ್ಷತೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಸಭೆ ನಡೆಯಿತು. ಮೊದಲೇ ರೋಸಿಹೋಗಿದ್ದ ರೈತರು ಸಭೆಯಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಯನ್ನೇ ಸುರಿಸಿದ್ದಾರೆ.
ಪಿಡಿಓಗಳಿಗೆ ತರಾಟೆಗೆ ತಗೆದುಕೊಂಡ ಗ್ರಾಮಸ್ಥರು
ಎಸಿಬಿ ಅಧಿಕಾರಿ ಶಿವಮಲ್ಲಯ್ಯ ಅಧ್ಯಕ್ಷತೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಸಭೆ ನಡೆಯಿತು. ಮೊದಲೇ ರೋಸಿಹೋಗಿದ್ದ ರೈತರು ಸಭೆಯಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಯನ್ನೇ ಸುರಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಈಗಾಗಲೇ ಬರಪೀಡಿತ ಜಿಲ್ಲೆ ಎಂದು ಘೋಷಣೆಯಾಗಿದ್ದು, ನೀರಿಲ್ಲದೆ ಬಯಲು ಸೀಮೆಯ ರೈತನ ಜೀವನ ಬರಬಾದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇರುವ ಅಲ್ಪಸ್ವಲ್ಪ ಭೂ ದಾಖಲೆಗಳನ್ನು ಕಾಪಾಡಿಕೊಳ್ಳುವ ತವಕದಲ್ಲಿ ಗ್ರಾಮ ಪಂಚಾಯತಿಗೆ ಹೋದರೆ ಅಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದರು.