ಚಿಕ್ಕಬಳ್ಳಾಪುರ: ಹಿಜಾಬ್ ವಿವಾದದ ಹಿಂದೆ ಬಿಜೆಪಿ ಹಾಗೂ ಆರ್‌ಎಸ್ಎಸ್ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.
ಶನಿವಾರ ತಾಲೂಕಿನ ನಂದಿ ಗಿರಿಧಾಮದಲ್ಲಿ ಕಾಂಗ್ರೆಸ್ ಸದಸ್ಯತ್ವ ಸಭೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ 50 ಸಾವಿರ ಸದಸ್ಯತ್ವ ಅಭಿಯಾನ ಶುರುವಾಗಿದೆ. ಪ್ರತಿ ಕ್ಷೇತ್ರದಿಂದ ಸಾಕಷ್ಟು ಜನ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ವಿಶೇಷ ಕಾಳಜಿ ಜನತೆಗೆ ಉಲ್ಲಾಸವಿದೆ ಎಂದು ತಿಳಿಸಿದರು.
ಅಧಿವೇಶನದ ಧರಣಿ ಬಗ್ಗೆ ಮಾತಾನಾಡಿದ ಮೊಯ್ಲಿ, ಇದೆಲ್ಲಾ ಸಚಿವ ಈಶ್ವರಪ್ಪ ಅವರ ಹೇಳಿಕೆಯಿಂದ ಪ್ರಾರಂಭವಾಗಿದೆ. ಅವರ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾದದ್ದು. ಸಚಿವರಾಗಿ, ಶಾಸಕರಾಗಿ ಸಂವಿಧಾನಕ್ಕೆ ಮಾಡಿರುವ ದ್ರೋಹ. ಈ ಬಗ್ಗೆ ಅವರಿಗೆ ಪಶ್ಚಾತ್ತಾಪ ಇಲ್ಲಾ, ಅವರು ಮಾಡಿದ್ದೇ ಸರಿ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದರು.