ಚಿಕ್ಕಬಳ್ಳಾಪುರ: ಗಣೇಶ ಮೂರ್ತಿಗಳನ್ನು ವಿತರಿಸಿದರೂ, ಸೀರೆಗಳನ್ನು ಹಂಚಿದರೂ ಮುಂದಿನ ಚುನಾವಣೆಯಲ್ಲಿ ಸುಧಾಕರ್ ಗೆಲ್ಲುವುದಿಲ್ಲ. ಜನರು ಅವರಿಗೆ ತಕ್ಕ ಬುದ್ದಿ ಕಲಿಸುತ್ತಾರೆ ಎಂದು ಚಿಕ್ಕಬಳ್ಳಾಪುರ ಮಾಜಿ ಸಂಸದ ವೀರಪ್ಪ ಮೊಯ್ಲಿ ಕಿಡಿಕಾರಿದ್ದಾರೆ.
ಎಷ್ಟೇ ಸೀರೆ ಹಂಚಿದರೂ ಸುಧಾಕರ್ ಮತ್ತೆ ಗೆಲ್ಲುವುದಿಲ್ಲ: ಮೊಯ್ಲಿ - Veerappa moily
ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಒಂದು ವೇಳೆ ಸ್ಪರ್ಧಿಸಿದರೂ ಜನ ಯಾವುದೇ ಆಮಿಷಗಳಿಗೊಳಗಾಗದೇ ಸುಧಾಕರ್ ಅವರನ್ನು ಸೋಲಿಸುವುದು ಖಚಿತ ಎಂದ ಮೊಯ್ಲಿ.
ಸಮ್ಮಿಶ್ರ ಸರ್ಕಾರ ಉರುಳಲು ಕಾರಣರಾದ ಬಂಡಾಯ ಶಾಸಕರ ವಿರುದ್ಧ ಹರಿಹಾಯ್ದ ಮಾಜಿ ಸಂಸದ ವೀರಪ್ಪ ಮೊಯ್ಲಿ ಅನರ್ಹ ಶಾಸಕರಿಗೆ ಟಾಂಗ್ ಕೊಟ್ಟಿದ್ದಾರೆ. ಅಮೃತ ಕುಡಿದವರೇ ಬದುಕೋದಿಲ್ಲ, ಇನ್ನು ವಿಷ ಕುಡಿದವರು ಬದುಕ್ತಾರಾ ಎಂಬಂತಾಗಿದೆ ಈಗಿನ ಅನರ್ಹ ಶಾಸಕರ ಪರಿಸ್ಥಿತಿ ಎಂದಿದ್ದಾರೆ.
ಅನರ್ಹ ಶಾಸಕರ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದೆ. ತೀರ್ಪು ಬರುವುದಕ್ಕೂ ಮುನ್ನವೇ ಚುನಾವಣೆ ಎದುರಾದರೆ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಒಂದು ವೇಳೆ ಸ್ಪರ್ಧಿಸಿದರೂ ಜನ ಯಾವುದೇ ಆಮಿಷಗಳಿಗೊಳಗಾಗದೇ ಸುಧಾಕರ್ ಅವರನ್ನು ಸೋಲಿಸುವುದು ಖಚಿತ ಎಂದು ಮೊಯ್ಲಿ ಭವಿಷ್ಯ ನುಡಿದರು.