ಚಿಕ್ಕಬಳ್ಳಾಪುರ:ವಾಲ್ಮೀಕಿ ಸಮುದಾಯದ ಕಾಮಗಾರಿ ವಿಳಂಬವಾಗಲು ಕಾರಣ ಏನು ಎಂದು ಶಾಸಕ ಕೃಷ್ಣಾರೆಡ್ಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಾಲ್ಮೀಕಿ ಸಮುದಾಯದ ಕಾಮಗಾರಿ ಮಂದಗತಿ: ಅಧಿಕಾರಿಗಳಿಗೆ ಕೃಷ್ಣಾರೆಡ್ಡಿ ತರಾಟೆ - latest news of chickballaapura
ವಾಲ್ಮೀಕಿ ಸಮುದಾಯದ ಕಾಮಗಾರಿ ವಿಳಂಬವಾಗಲು ಕಾರಣ ಏನು ಎಂದು ಶಾಸಕ ಕೃಷ್ಣಾರೆಡ್ಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಾಲ್ಮೀಕಿ ಸಮುದಾಯದ ಕಾಮಗಾರಿ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಎಂ ಕೃಷ್ಣಾರೆಡ್ಡಿ
ವಾಲ್ಮೀಕಿ ಸಮುದಾಯದ ಕಾಮಗಾರಿ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಎಂ ಕೃಷ್ಣಾರೆಡ್ಡಿ
ಪ್ರವಾಸೋದ್ಯಮ ಸಚಿವರ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಿಳಂಭವಾಗಲು ಕಾರಣ ಏನು? ಎಷ್ಟು ಸಮಯ ಬೇಕು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಗುರುವಾರದಂದು ನಡೆದ ವಾಲ್ಮೀಕಿ ಸಮುದಾಯದ ಪೂರ್ವಭಾವಿ ಸಭೆಯಲ್ಲಿ, ಅಂಬೇಡ್ಕರ್ ಭವನ ಸೇರಿದಂತೆ ವಾಲ್ಮೀಕಿ ಸಮುದಾಯ ಭವನದ ಕಾಮಗಾರಿಯನ್ನು 10 ವರ್ಷಗಳು ಕಳೆದರೂ ಸಹ ಪೂರ್ಣವಾಗಿಲ್ಲ ಎಂದು ಸಮುದಾಯದ ಮುಖಂಡರು ಅಧಿಕಾರಿಗಳ ಕೊರಳು ಪಟ್ಟಿ ಹಿಡಿದು ಪ್ರಶ್ನೆ ಕೇಳಿದ್ದರು. ಇದು ಶಾಸಕರ ಗಮನಕ್ಕೆ ಬಂದಿತ್ತು.
ಸದ್ಯ ಇದೇ ವಿಚಾರದ ಕುರಿತು ಸಭೆಯಲ್ಲಿ ಚಿಂತಾಮಣಿ ಕ್ಷೇತ್ರದ ಶಾಸಕ, ಅಧಿಕಾರಿಗಳಿಗೆ ಪ್ರಶ್ನೆ ಕೇಳಿ ಚಳಿ ಬಿಡಿಸಿದ್ದಾರೆ. ಹಣ ಬಿಡುಗಡೆಯಾದ್ರೂ ಇನ್ನೂ ಕಾಮಾಗಾರಿಗಳು ಮಾತ್ರ ಪೂರ್ಣಗೊಳ್ಳುತ್ತಿಲ್ಲ. ಇದಕ್ಕೆ ಕಾರಣವೇನೆಂದು ತರಾಟೆಗೆ ತೆಗೆದುಕೊಂಡಿದ್ದಾರೆ.