ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಿಗಮಗಳನ್ನು ಸ್ಥಾಪಿಸಿದೆ. ಆದರೆ, ಚಿಕ್ಕಬಳ್ಳಾಪುರದ ವಾಲ್ಮೀಕಿ ನಿಗಮದಲ್ಲಿ ಬಡವರಿಗಾಗಿ ಮೀಸಲಿಟ್ಟ ಹಣ ಅಧಿಕಾರಿಗಳ ಜೇಬು ಸೇರುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಹೌದು, ವಾಲ್ಮೀಕಿ ನಿಗಮವು ಪ್ರತಿವರ್ಷ ವಾಡಿಕೆಯಂತೆ ಗಂಗಾಕಲ್ಯಾಣ ಯೋಜನೆಗೆ ,ಸ್ವಯಂ ಉದ್ಯೋಗ, ಕರಕುಶಲ ಯೋಜನೆಗಳು, ಮಹಿಳಾ ಸ್ತ್ರೀ ಸಂಘಗಳಿಗೆ ನೇರಸಾಲ, ಬ್ಯಾಂಕ್ ಸಾಲ ಹೀಗೆ ಕೋಟ್ಯಂತರ ರೂಪಾಯಿಗಳನ್ನು ಫಲಾನುಭವಿಗಳಿಗೆ ನೀಡುತ್ತಿದೆ. ಆದರೆ ಚಿಕ್ಕಬಳ್ಳಾಪುರ ವಾಲ್ಮೀಕಿ ನಿಗಮದಲ್ಲಿ ಬಡವರಿಗೆ ಸಾಲ ನೀಡಲು ಫೀಲ್ಡ್ ಆಫೀಸರ್ ವೆಂಕಟರವಣಪ್ಪ ಸಾವಿರಾರು ರೂಪಾಯಿ ಹಣವನ್ನು ಫೋನ್ಪೇ(PhonePe) ಮೂಲಕ ಲಂಚ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಫೋನ್ ಪೇ ಮೂಲಕ ಹಣವನ್ನು ತಮ್ಮ ಮಗ ಅಭಿಶೇಕ್ ಆಕೌಂಟ್ಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.