ಚಿಕ್ಕಬಳ್ಳಾಪುರ:ಇಲ್ಲಿನ ಗೌರಿಬಿದನೂರು ತಾಲೂಕಿನಮಿನಿವಿಧಾನ ಸೌಧ ಹಿಂಭಾಗದಲ್ಲಿ ಅಪರಿಚಿತ ಮಹಿಳೆಯ ಶವ ಅರೆ ಬರೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಗೌರಿಬಿದನೂರು: ಮಿನಿ ವಿಧಾನಸೌಧದ ಹಿಂಭಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ - ಪಿಎಸ್ಐ ಲಕ್ಷ್ಮಿನಾರಾಯಣ
ಗೌರಿಬಿದನೂರು ತಾಲೂಕಿನ ಮಿನಿ ವಿಧಾನಸೌಧ ಹಿಂಭಾಗದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
![ಗೌರಿಬಿದನೂರು: ಮಿನಿ ವಿಧಾನಸೌಧದ ಹಿಂಭಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ Gouribidanuru police](https://etvbharatimages.akamaized.net/etvbharat/prod-images/768-512-13453589-thumbnail-3x2-asd.jpg)
ಗೌರಿಬಿದನೂರು ಪೊಲೀಸ್ ಠಾಣೆ
ಶವದ ಬಳಿಕ ಮೊಬೈಲ್ ಸಹ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಮಹಿಳೆಯ ಗುರುತು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಸ್ಥಳಕ್ಕೆ ಮಂಚೇನಹಳ್ಳಿ ಪಿಎಸ್ಐ ಲಕ್ಷ್ಮಿನಾರಾಯಣ, ಸಿಪಿಐ ಶಶಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೌರಿಬಿದನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಓದಿ:ಪೊಲೀಸ್ ಪರೀಕ್ಷೆಯಲ್ಲಿ ನಕಲು ಮಾಡಲು ಪ್ಲಾನ್: ಮೂವರು ಅಭ್ಯರ್ಥಿಗಳು ಸೇರಿ 11 ಜನರ ಬಂಧನ