ಕರ್ನಾಟಕ

karnataka

ETV Bharat / state

ಅಪರಿಚಿತ ವಾಹನ ಡಿಕ್ಕಿ: ಆಟೋ ಚಾಲಕ ಸ್ಥಳದಲ್ಲೇ ಸಾವು - Unknown vehicle collision in chikkaballapura

ಚಿಕ್ಕಬಳ್ಳಾಪುರದ ವರ್ಲಕೊಂಡ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಬಳಿ ಅಪರಿಚಿತ ವಾಹನವೊಂದು ಆಟೋಗೆ ಡಿಕ್ಕಿ ಹೊಡೆದಿದ್ದು, ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸಾವನ್ನಪ್ಪಿದ ಚಾಲಕ

By

Published : Nov 9, 2019, 1:50 PM IST

ಚಿಕ್ಕಬಳ್ಳಾಪುರ: ತರಕಾರಿ ಸಾಗುಸಿತ್ತಿದ್ದ ಆಟೋವೊಂದಕ್ಕೆ ಅಪರಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ವರ್ಲಕೊಂಡ ಸಮೀಪ ರಾಷ್ಟ್ರೀಯ ಹೆದ್ದಾರಿ 7ರ ಬಳಿ ಈ ಅಪಘಾತ ನಡೆದಿದ್ದು, ಚಿಕ್ಕಬಳ್ಳಾಪುರದಿಂದ ಬಾಗೆಪಲ್ಲಿಗೆ ತರಕಾರಿ ಸಾಗಿಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಅಪರಿಚಿತ ವಾಹನ ತರಕಾರಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಶ್ರೀನಿವಾಸ (36) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಗುಡಿಬಂಡೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details