ಚಿಕ್ಕಬಳ್ಳಾಪುರ:ವ್ಯಕ್ತಿಯೊಬ್ಬನನ್ನು ಆತನ ಜಮೀನಿನಲ್ಲೇ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಬೆಳ್ಳಾವಳಹಳ್ಳಿ ಗ್ರಾಮದ ವೆಂಕಟೇಶ್ @ಡ್ರೈವರ್ ವೆಂಕಟೇಶ್ (45) ಕೊಲೆಯಾದ ವ್ಯಕ್ತಿ. ಈತ ನಿನ್ನೆ ಸಂಜೆ ಜಮೀನಿನ ಬಳಿ ಹೋಗಿದ್ದು, ಮನೆಗೆ ಹಿಂತಿರುಗಿ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡು ಅವರ ಮಗ ಹೊಲದ ಬಳಿ ಹೋಗಿ ನೋಡಿದಾಗ ವೆಂಕಟೇಶ್ ಕೊಲೆಯಾಗಿರುವ ವಿಚಾರ ಬೆಳೆಕಿಗೆ ಬಂದಿದೆ.