ಕರ್ನಾಟಕ

karnataka

ETV Bharat / state

ವಿಶೇಷಚೇತನ ಮಗು ಅಪಶಕುನವೆಂದು ದುಷ್ಕೃತ್ಯ: ತಬ್ಬಿಕೊಳ್ಳಲು ಬಂದ ಕಂದಮ್ಮನ ಕೊಲೆಗೈದ ಚಿಕ್ಕಪ್ಪ - ಚಿಕ್ಕಪ್ಪನಿಂದ ಮಗು ಹತ್ಯೆ

ಅಣ್ಣನ ಮಗಳು ಚಾರ್ವಿತಾ ಹುಟ್ಟಿದಾಗಿನಿಂದ ದೃಷ್ಟಿ ದೋಷ ಹೊಂದಿದ್ದಳು. ಆದರೆ ಶಂಕರ್ ಬಾಲಕಿಯನ್ನು ಹುಟ್ಟಿದಾಗಿನಿಂದ ಕೆಟ್ಟ ಶಕುನವೆಂದು ಪರಿಗಣಿಸುತ್ತಿದ್ದ. ಮಗುವನ್ನು ಕೊಲೆ ಮಾಡುವಂತೆ ಅಣ್ಣನ ಬಳಿಯೂ ಹೇಳಿದ್ದನಂತೆ.

uncle-murdered-a-5-year-old-girl-because-of Physically challenged child
ವಿಶೇಷಚೇತನ ಮಗು ಅಪಶಕುನ ಎಂದು ಕತ್ತು ಕೊಯ್ದು ಕೊಲೆ ಮಾಡಿದ ಪಾಪಿ ಚಿಕ್ಕಪ್ಪ..!

By

Published : Jan 12, 2021, 9:30 PM IST

ಚಿಕ್ಕಬಳ್ಳಾಪುರ: ಸ್ವತಃ ಚಿಕ್ಕಪ್ಪನೇ ಐದು ವರ್ಷದ ವಿಶೇಷ ಚೇತನ ಹೆಣ್ಣು ಮಗುವಿನ ಕತ್ತು ಕೊಯ್ದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಂಗರೇಖನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚಾರ್ವಿತಾ (5) ತನ್ನ ಕೊಲೆಯಾದ ಮಗು ಎಂದು ತಿಳಿದುಬಂದಿದೆ.

ಶಂಕರ್(35) ಎಂಬಾತ ಮಗುವನ್ನು ಕೊಲೈಗೈದ ಆರೋಪಿ. ಈತ ವೃತ್ತಿಯಲ್ಲಿ ಹೂ ವ್ಯಾಪಾರಿಯಾಗಿದ್ದು, ಅಣ್ಣನ ಮಗಳು ಚಾರ್ವಿತಾ ಹುಟ್ಟಿದಾಗಿನಿಂದ ದೃಷ್ಟಿ ದೋಷದಿಂದ ಬಳಲುತ್ತಿದ್ದಳು. ಆದರೆ ಶಂಕರ್ ಬಾಲಕಿಯನ್ನು ಕೆಟ್ಟ ಶಕುನವೆಂದು ಪರಿಗಣಿಸುತ್ತಿದ್ದ ಎಂದು ತಿಳಿದುಬಂದಿದೆ.

ಇಷ್ಟೇ ಅಲ್ಲದೆ ಮಗುವನ್ನು ಕೊಲೆ ಮಾಡುವಂತೆ ಅಣ್ಣನ ಮುಂದೆಯೇ ಹೇಳಿದ್ದನಂತೆ. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿ ಶಂಕರ್​​ನನ್ನು ಮನೆಯಿಂದ ಆಚೆ ಹಾಕಲಾಗಿತ್ತು.

ಕೆಲವು ದಿನಗಳ ನಂತರ ಮತ್ತೆ ಮನೆಗೆ ಬಂದ ವೇಳೆ ಪುಟ್ಟ ಬಾಲಕಿ ಚಿಕ್ಕಪ್ಪನನ್ನು ಪ್ರೀತಿಯಿಂದ ತಬ್ಬಿಕೊಳ್ಳಲು ಬಂದಾಗ ಜೇಬಿನಲ್ಲಿದ್ದ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕೇಂದ್ರ ಸಚಿವರ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಯುವಕರು: ಅಪಘಾತದ ಕುರಿತು ಹೇಳಿದ್ದು ಹೀಗೆ!

ABOUT THE AUTHOR

...view details