ಕರ್ನಾಟಕ

karnataka

ETV Bharat / state

ಬಟ್ಟೆ ತೊಳೆಯಲು ಕೆರೆಗೆ ಹೋಗಿ ಕಾಲು ಜಾರಿ ಬಿದ್ದು ಇಬ್ಬರ ಸಾವು - Go to the lake and fall down

ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಮಹಿಳೆ ಹಾಗೂ ಬಾಲಕ ಮೃತಪಟ್ಟಿರುವ ಘಟನೆ ಚಿಂತಾಮಣಿ ತಾಲೂಕಿನ ಕೋಟಗಲ್ ಗ್ರಾಮದ ಬಳಿ‌ ನಡೆಸಿದೆ.

ಇಬ್ಬರು ಸಾವು
ಇಬ್ಬರು ಸಾವು

By

Published : Dec 11, 2020, 10:10 PM IST

ಚಿಕ್ಕಬಳ್ಳಾಪುರ(ಚಿಂತಾಮಣಿ): ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಮಹಿಳೆ ಹಾಗೂ ಬಾಲಕ ಮೃತಪಟ್ಟಿರುವ ಘಟನೆ ಚಿಂತಾಮಣಿ ತಾಲೂಕಿನ ಕೋಟಗಲ್ ಗ್ರಾಮದ ಬಳಿ‌ ನಡೆಸಿದೆ.

ಗ್ರಾಮದ ವೆಂಕಟರಾಜು ಮಗ ಗಗನ್ (9) ಹಾಗೂ ಅನಿತಾ (25) ನೀರುಪಾಲಾದ ಮೃತ ದುರ್ದೈವಿಗಳು. ಬೆಂಗಳೂರಿನ ‌ನಿವಾಸಿಯಾದ ಅನಿತ ರಜೆಯ ಹಿನ್ನಲೆ ಅಕ್ಕನ ಮನೆಗೆ ಬಂದಿದ್ದು, ಇಂದು ಬಟ್ಟೆ ತೊಳೆಯಲು ಗ್ರಾಮದ ಹೊರವಲಯದ ಕೆರೆಗೆ ಅಕ್ಕ ಹೇಮ ಜೊತೆಗೆ ಗಗನ್ ಹಾಗೂ ಅನಿತಾ ತೆರಳಿದ್ದಾರೆ.

ಕೆರೆಗೆ ಹೋಗಿ ಕಾಲುಜಾರಿ ಬಿದ್ದು ಇಬ್ಬರು ಸಾವು

ಈ ವೇಳೆ ಕಾಲು ಜಾರಿ ಅನಿತಾ ಹಳಕ್ಕೆ ಬಿದ್ದಿದ್ದಾಳೆ, ಕಾಪಾಡಲು ಗಗನ್‌ ಹಾಗೂ ಹೇಮ ಸಹಾಯಕ್ಕೆ ಹೋದ ವೇಳೆ ಇಬ್ಬರೂ ಕೂಡ ನೀರಿಗೆ ಬಿದ್ದಿದ್ದಾರೆ. ಬಳಿಕ ಸ್ಥಳೀಯರ ಸಹಾಯದಿಂದ ಹೇಮಾಳನ್ನು ದಡಕ್ಕೆ ಸಾಗಿಸಲಾಯಿತಾದರೂ ಗಗನ್ ಹಾಗೂ ಅನಿತಾಳನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ.

ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು, ತಹಶೀಲ್ದಾರ್ ಹನುಮಂತರಾಯಪ್ಪ ಶಾಸಕ ಕೃಷ್ಣಾರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details