ಚಿಕ್ಕಬಳ್ಳಾಪುರ:ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು (ಮಹಿಳೆ ಸೇರಿ) ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಒಬ್ಬ ಪರಾರಿಯಾಗಿದ್ದಾನೆ. ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಈ ಘಟನೆ ನಡೆದಿದೆ. ನಗರದ ಬಂಬೂ ಬಜಾರ್ನ ಶಬಾನಾ ಮತ್ತು ರಾಮಮಂದಿರ ಬಳಿ ವಾಸವಾಗಿರುವ ಅಭಿರಾಮ್ ಬಂಧಿತ ಆರೋಪಿಗಳು. ಇನ್ನೊಬ್ಬ ಆರೋಪಿ ರಾಕೇಶ್ ಶರ್ಮಾ ಎಂಬಾತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಗಾಂಜಾ ಮಾರಾಟ: ಮಹಿಳೆ ಸೇರಿ ಇಬ್ಬರ ಬಂಧನ, ಮತ್ತೋರ್ವ ಪರಾರಿ - ಗಾಂಜಾ ಮಾರಾಟ
ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ
ಬಂಬೂ ಬಜಾರ್ನ ಕೀರ್ತಿ ನಗರದಲ್ಲಿ ಕಳೆದ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ಇಬ್ಬರು ಯುವಕರು(ಅಭಿರಾಮ್ ಹಾಗೂ ರಾಕೇಶ್ ಶರ್ಮಾ) ಓಡಿ ಹೋಗುತ್ತಿದ್ದರು. ಅನುಮಾನಗೊಂಡ ಪೊಲೀಸರು ಹಿಡಿದು ವಿಚಾರಿಸಿದಾಗ ನಗರದ ಬಂಬೂ ಬಜಾರ್ನಲ್ಲಿ ಶಬಾನಾ ಎಂಬುವವರ ಮನೆಯಿಂದ ಗಾಂಜಾ ಪ್ಯಾಕೇಟ್ಗಳನ್ನು ತೆಗೆದುಕೊಂಡು ಹೋಗುತ್ತಿದ್ದೆ ಎಂದು ಅಭಿರಾಮ್ ಪೊಲೀಸರಿಗೆ ತಿಳಿಸಿದ್ದಾನೆ.
ಸದ್ಯ ಆರೋಪಿಗಳಿಂದ ಸುಮಾರು 100 ಗ್ರಾಂ ತೂಕದ 10 ಗಾಂಜಾ ಪ್ಯಾಕೇಟ್ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.