ಕರ್ನಾಟಕ

karnataka

ETV Bharat / state

ಚಿಂತಾಮಣಿ: ಕೊಳವೆ ಬಾವಿಗೆ ಹಳೇ ಪಂಪ್ ಸೆಟ್ ಅಳವಡಿಕೆ, ಗ್ರಾಮಸ್ಥರ ಆಕ್ರೋಶ - Tube well problem

ಕೊಳವೆ ಬಾವಿಗೆ ಹಳೇ ಪಂಪ್ ಸೆಂಟ್‌ ಹಾಕಿಸಿದ್ದಾರೆಂದು ಚಿಕ್ಕಕೊಂಡ್ರಹಳ್ಳಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Tube well problem in chikkaballapura
ಚಿಕ್ಕಬಳ್ಳಾಪುರ ಕೊಳವೆ ಬಾವಿ ಸಮಸ್ಯೆ

By

Published : Jul 6, 2022, 7:59 AM IST

Updated : Jul 6, 2022, 12:02 PM IST

ಚಿಕ್ಕಬಳ್ಳಾಪುರ: ಕೊಳವೆ ಬಾವಿಯ ಮೋಟಾರ್ ಪಂಪ್ ಕೆಟ್ಟು ಹೋಗಿದ್ದು ಸರ್ಕಾರದ ವತಿಯಿಂದ ಹೊಸ ಪಂಪ್‌ಸೆಟ್ ಕೊಟ್ಟರೂ ಅದನ್ನು ಬೇರೆಯವರಿಗೆ ಮಾರಾಟ ಮಾಡಿ ಹಳೇ ಪಂಪ್ ಸೆಂಟ್‌ ಅಳವಡಿಸಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಕ್ಕಕೊಂಡ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.


ಚಿಂತಾಮಣಿ ತಾಲೂಕಿನ ಉಪ್ಪರಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕೊಂಡ್ರಹಳ್ಳಿ ಗ್ರಾಮದಲ್ಲಿ ಕಳೆದ ಕೆಲ ದಿನಗಳ ಹಿಂದೆ ಕೊಳವೆ ಬಾವಿಯ ಪಂಪ್ ಸೆಟ್ ಕೆಟ್ಟು ಹೋಗಿತ್ತು. ಅದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲ. ನಿನ್ನೆ ಏಕಾಏಕಿ ಗುತ್ತಿಗೆದಾರರು ಬಂದು ಹಳೇ ಪಂಪ್ ಸೆಟ್ ಹಾಗೂ ಕಳಪೆ ಪೈಪ್​​ಗಳನ್ನು ಹಾಕಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ಹೊಸ ಪಂಪ್ ಸೆಟ್ ಅನ್ನು ಕೊಳವೆಬಾವಿಗೆ ಅಳವಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಗೌರಿ ಲಂಕೇಶ್ ಹತ್ಯೆ ವಿಚಾರಣೆ: ಪಾಟೀ ಸವಾಲ್​ಗೆ ಮೊದಲ ಸಾಕ್ಷಿಯಾಗಿ ಕವಿತಾ ಲಂಕೇಶ್ ಉತ್ತರ

Last Updated : Jul 6, 2022, 12:02 PM IST

ABOUT THE AUTHOR

...view details