ಚಿಕ್ಕಬಳ್ಳಾಪುರ:ರೈಲ್ವೆ ಹಳಿ ಮೇಲೆ ಕುಳಿತು ಮದ್ಯಪಾನ ಮಾಡುತ್ತಿದ್ದಾಗ ಹಳಿ ತಪಾಸಣಾ ರೈಲಿಗೆ ಸಿಲುಕಿ ಒಬ್ಬ ಸಾವನ್ನಪ್ಪಿದ್ದು ಮತ್ತೋರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ನಡೆದಿದೆ. ಮೃತಪಟ್ಟವನ ವಯಸ್ಸು ಸುಮಾರು 50 ಆಗಿದ್ದು, ಹೆಚ್ಚಿನ ವಿವರ ತಿಳಿದಿಲ್ಲ. ಮೃತ ರಾಮನಗರ ಮೂಲದವರು ಎಂದು ಹೇಳಲಾಗುತ್ತಿದ್ದು ರೇಷ್ಮೆನೂಲು ಬಿಚ್ಚಾಣಿಕೆಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಸಾದಿಕ್(45) ಶಿಡ್ಲಘಟ್ಟದ ವಾಸಿ ಎಂದು ಗುರುತಿಸಲಾಗಿದ್ದು, ರೇಷ್ಮೆನೂಲು ಬಿಚ್ಚಾಣಿಕೆ ಕೂಲಿ ಕಾರ್ಮಿಕನಾಗಿದ್ದ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ಸಾದಿಕ್‍ನನ್ನು ಹೆಚ್ಚಿನ ಚಿಕಿತ್ಸೆಗೆ ಎಂದು ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.