ಚಿಕ್ಕಬಳ್ಳಾಪುರ: ನಗರದ ಶಿಡ್ಲಘಟ್ಟ ವೃತ್ತದ ಬಳಿ ಟ್ರಾಫಿಕ್ ಪೊಲೀಸರು ಪ್ರತಿನಿತ್ಯದಂತೆ ವಾಹನಗಳ ತಾಪಸಣೆ ನಡೆಸುತ್ತಿದ್ದ ವೇಳೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಕಡೆಗೆ ಬಂದು ಶಿಡ್ಲಘಟ್ಟ ಸರ್ಕಲ್ನಲ್ಲಿ ಬೈಕ್ ಸವಾರನೊಬ್ಬ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ವಾಹನದ ದಾಖಲೆ ಕೇಳಿದ್ದಕ್ಕೆ ಪೊಲೀಸರೊಂದಿಗೆ ಬೈಕ್ ಸವಾರನ ವಾಗ್ವಾದ - ವಾಹನ ದಾಖಲೆ ನೀಡದೇ ಪೊಲೀಸರೊಂದಿಗೆ ವಾಗ್ವಾದ
ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಬೈಕ್ ಸವಾರನೊಬ್ಬ ಟ್ರಾಫಿಕ್ ಪೊಲೀಸರಿಗೆ ತಪ್ಪು ಮಾಹಿತಿ ನೀಡಿ 1,500 ದಂಡ ಕಟ್ಟಿದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
![ವಾಹನದ ದಾಖಲೆ ಕೇಳಿದ್ದಕ್ಕೆ ಪೊಲೀಸರೊಂದಿಗೆ ಬೈಕ್ ಸವಾರನ ವಾಗ್ವಾದ ಬೈಕ್ ಸವಾರ](https://etvbharatimages.akamaized.net/etvbharat/prod-images/768-512-5587158-thumbnail-3x2-sfh.jpg)
ಬೈಕ್ ಸವಾರ
ಪೊಲೀಸರಿಗೆ ತಪ್ಪು ಮಾಹಿತಿ ನೀಡಿ 1,500 ದಂಡ ಕಟ್ಟಿದ ಬೈಕ್ ಸವಾರ
ಬೆಂಗಳೂರಿನಿಂದ ಬಂದ ಈತ ದಾಖಲೆಗಳನ್ನು ಕೇಳಿದಾಗ ತಪ್ಪು ಮಾಹಿತಿ ನೀಡಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ನಂತರ ವಾಹನ ಪರಿಶೀಲನೆ ವೇಳೆ ನಂಬರ್ ಪ್ಲೇಟ್, ಡಿಎಲ್ ಇಲ್ಲದೆ ಬೈಕ್ ಚಾಲನೆ ಮಾಡಿದ್ದಕ್ಕಾಗಿ ಪೊಲೀಸರು 1,500 ರೂ. ದಂಡ ವಿಧಿಸಿದ್ದಾರೆ. ಬಳಿಕ ವಾಹನವನ್ನು ವಶಕ್ಕೆ ಪಡೆದು ಸವಾರನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.