ಕರ್ನಾಟಕ

karnataka

ETV Bharat / state

ಪಟ್ಟಣ ಪಂಚಾಯತ್ ಸಮರ: ಕೊರೊನಾ ನಡುವೆಯೂ ಈ ಬಾರಿ ಮತದಾನ ಪ್ರಮಾಣ ಗಣನೀಯ ಏರಿಕೆ! - ಪಟ್ಟಣ ಪಂಚಾಯತ್ ಚುನಾವಣೆ

ಕೊರೊನಾದ ಆತಂಕದ ನಡುವೆಯೂ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಗುಡಿಬಂಡೆ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಈ ಬಾರಿ ಶೇ.71.06ರಷ್ಟು ಮತದಾನವಾಗಿದೆ.

Chikkaballapur
Chikkaballapur

By

Published : Apr 27, 2021, 8:56 PM IST

ಚಿಕ್ಕಬಳ್ಳಾಪುರ : ಕೊರೊನಾ ಮಹಾಮಾರಿ ಆತಂಕದ ನಡುವಲ್ಲೂ 2013ರ ಚುನಾವಣೆಗೆ ಹೋಲಿಕೆ ಮಾಡಿದರೆ, ಪ್ರಸಕ್ತ ಸಾಲಿನ ಗುಡಿಬಂಡೆ ಪಟ್ಟಣ ಪಂಚಾಯತ್ ಚುನಾವಣೆಯ ಮತದಾನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಒಟ್ಟಾರೆ ಶೇ.71 ಕ್ಕಿಂತಲೂ ಹೆಚ್ಚು ಮತದಾನವಾಗಿರುವುದು ಕಂಡು ಬಂದಿದೆ.

ಕಳೆದ ಗುಡಿಬಂಡೆ ಪಟ್ಟಣ ಪಂಚಾಯತ್ ಚುನಾವಣೆಗೆ ಹೋಲಿಕೆ ಮಾಡಿದರೆ, ಈ ಬಾರಿ ಉತ್ತಮವಾಗಿ ಮತದಾನವಾಗಿದೆ. ಕೊರೊನಾದ ಆತಂಕದ ನಡುವೆಯೂ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಗುಡಿಬಂಡೆ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 2013 ರಲ್ಲಿ ಶೇ.65.48ರಷ್ಟು ಮತದಾನವಾದರೆ, ಈ ಬಾರಿ ಶೇ.71.06ರಷ್ಟು ಮತದಾನವಾಗಿದೆ.

ಕೊನೆಯ ಒಂದು ತಾಸು ಮತದಾನ ಅವಧಿಯನ್ನು ಕೋವಿಡ್ ಸೋಂಕಿತರಿಗೆ ತಮ್ಮ ಹಕ್ಕು ಚಲಾಯಿಸಲು ಮೀಸಲಿಡಲಾಗಿತ್ತು. ಕೋವಿಡ್ ಕೇರ್ ಸೆಂಟರಿನಲ್ಲಿ ಇದ್ದ 4ನೇ ವಾರ್ಡ್​ನಲ್ಲಿದ್ದ ಒಬ್ಬರು ಮತದಾನ ಮಾಡಿದರು. ಇವರಿಗೆ ಪಿಪಿಇ ಕಿಟ್ ಧರಿಸಿ ಮತ ಚಲಾಯಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಮತದಾನದ ನಂತರ ಮತಗಟ್ಟೆ ಸಂಪುರ್ಣ ಸ್ಯಾನಿಟೈಸ್ ಮಾಡಲಾಯಿತು.

ಏಪ್ರಿಲ್ 30 ಕ್ಕೆ ಮತಎಣಿಕೆ:

ಭಾರೀ ಕುತೂಹಲ ಕೆರಳಿಸಿರುವ ಪಟ್ಟಣ ಪಂಚಾಯತ್ ಚುನಾವಣೆಯ ಮತ ಎಣಿಕೆಯು ಏಪ್ರಿಲ್ 30 ರಂದು ನಡೆಯಲಿದೆ. ಚುನಾವಣೆಯಲ್ಲಿ ಅಂತಿಮವಾಗಿ ಒಟ್ಟು 50 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇದನ್ನು ಓದಿ:ಭಿಕ್ಷೆ ಹಾಕಬೇಕಿರುವವರಿಗೇ ಕೊರೊನಾದಿಂದ ವ್ಯಾಪಾರವಿಲ್ಲ.. ಮಂಗಳಮುಖಿಯರ ಬದುಕು ಮೂರಾಬಟ್ಟೆ‌..

ABOUT THE AUTHOR

...view details