ಚಿಕ್ಕಬಳ್ಳಾಪುರ :ಇಂದು ಪ್ರೇಮಿಗಳ ದಿನವಾದ ಕಾರಣ ಚಿಕ್ಕಬಳ್ಳಾಪುರದ ಪರಿಸರ ಸೊಬಗು ನಂದಿಬೆಟ್ಟದಲ್ಲಿ ಪ್ರಣಯ ಪಕ್ಷಿಗಳು ದಾಂಗುಡಿ ಇಟ್ಟಿದ್ದು ಭಾರೀ ವಾಹನ ದಟ್ಟಣೆ ಉಂಟಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿರುವುದು ನಂದಿ ಬೆಟ್ಟದಲ್ಲಿ ಮತ್ತೆ ಪ್ರವಾಸಿಗರ ಕಲರವ ಶುರುವಾಗಿದೆ. ಇಂದು ಮುಂಜಾನೆಯಿಂದಲೂ ದ್ವಿಚಕ್ರ ವಾಹನ, ಕಾರುಗಳ ಮೂಲಕ ಸಾವಿರಾರು ಜನರು ಭೇಟಿ ಕೊಟ್ಟಿದ್ದು, ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ನಂದಿ ಗಿರಿಧಾಮದಲ್ಲಿ ಪ್ರಣಯ ಪಕ್ಷಿಗಳ ದಂಡು ಬೆಳಗ್ಗೆ 5 ಗಂಟೆಗೆ ಸೂರ್ಯೋದಯ ನೋಡುವುದರೊಂದಿಗೆ ಪ್ರೇಮಿಗಳ ದಿನ ಆಚರಿಸಲು ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಜಿಲ್ಲಾಡಳಿತ ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಒದಗಿಸಲಾಗಿದೆ.
ಇನ್ನೂ ನಂದಿ ಬೆಟ್ಟದ ಮೇಲೆ ಪ್ರೇಮಿಗಳು ನಂದಿ ಸೊಬಗನ್ನು ಸವಿಯುತ್ತಿದ್ದು, ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ತಲ್ಲೀನರಾಗಿದ್ದಾರೆ. ಈ ಹಿಂದೆ ಕೊರೊನಾ ಹಿನ್ನೆಲೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದರಿಂದ ಬೆಟ್ಟ ಪ್ರವೇಶಿಸಲು ಯಾರಿಗೂ ಅವಕಾಶ ಇರದ ಕಾರಣ ಪ್ರವಾಸಿಗರು ನಿರಾಶೆಯಿಂದ ಜಿಲ್ಲಾಡಳಿತ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.
ಓದಿ:ರಾಜ್ಯದ ವಿವಿಧೆಡೆ ಆಕಾಶದಲ್ಲಿ ಕಂಡುಬಂತು ವಿಚಿತ್ರ ಬೆಳಕು: ಜನರಲ್ಲಿ ಕುತೂಹಲ, ಆತಂಕ