ಕರ್ನಾಟಕ

karnataka

ETV Bharat / state

ಬಾಗೇಪಲ್ಲಿಯಲ್ಲಿ ನಾಳೆ ಮಾಸ್ಕ್ ಡೇ ಆಚರಣೆ: ಎ.ಜಿ. ಸುಧಾಕರ್

ಬಾಗೇಪಲ್ಲಿ ಪಟ್ಟಣದಲ್ಲಿ ಗುರುವಾರ ಮಾಸ್ಕ್‌ ಡೇ ನಡೆಸುವ ಮೂಲಕ ಮಾಸ್ಕ್‌ ಬಳಕೆಯ ಅಗತ್ಯತೆ ಕುರಿತಾಗಿ ಜಾಗೃತಿ ಮೂಡಿಸಲಾಗುವುದು ಎಂದು ಕೊರೊನಾ ನಿಯಂತ್ರಣ ಮುಖ್ಯ ಕಾರ್ಯದರ್ಶಿ ಎ.ಜಿ. ಸುಧಾಕರ್ ಹೇಳಿದರು.

Tomorrow Mask Day Celebration in Bagepalli
ಬಾಗೇಪಲ್ಲಿಯಲ್ಲಿ ನಾಳೆ ಮಾಸ್ಕ್ ಡೇ ಆಚರಣೆ

By

Published : Jun 17, 2020, 5:31 PM IST

ಬಾಗೇಪಲ್ಲಿ: ಕೊರೊನಾ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜನರು ಮಾಸ್ಕ್ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸುವ ಸಲುವಾಗಿ ಗುರುವಾರ ರಾಜ್ಯಾದ್ಯಂತ ಮಾಸ್ಕ್‌ ಡೇ ಹಮ್ಮಿಕೊಳ್ಳಲು ರಾಜ್ಯಸರ್ಕಾರ ನಿರ್ಧರಿಸಿದೆ.

ಬಾಗೇಪಲ್ಲಿಯಲ್ಲಿ ನಾಳೆ ಮಾಸ್ಕ್ ಡೇ ಆಚರಣೆ

ಈ ನಿಟ್ಟಿನಲ್ಲಿ ಮಾಸ್ಕ್‌ ಬಳಕೆ ಅತೀ ಮುಖ್ಯವಾಗಿದೆ. ಹೀಗಿದ್ದರೂ ಜನರು ಮಾಸ್ಕ್‌ ಬಳಕೆ ಮಾಡುತ್ತಿಲ್ಲ. ಸರ್ಕಾರ ಅರಿವು ಮೂಡಿಸಿದರೂ ಜನರು ಪಾಲನೆ ಮಾಡುತ್ತಿಲ್ಲ. ಈ ಕಾರಣಕ್ಕಾಗಿ ಬಾಗೇಪಲ್ಲಿ ಪಟ್ಟಣದಲ್ಲಿ ಗುರುವಾರ ಮಾಸ್ಕ್‌ ಡೇ ನಡೆಸುವ ಮೂಲಕ ಮಾಸ್ಕ್‌ ಬಳಕೆಯ ಅಗತ್ಯತೆ ಕುರಿತಾಗಿ ಜಾಗೃತಿ ಮೂಡಿಸಲಿದೆ ಎಂದು ಕೊರೊನಾ ನಿಯಂತ್ರಣ ಮುಖ್ಯ ಕಾರ್ಯದರ್ಶಿ ಎ.ಜಿ. ಸುಧಾಕರ್ ಹೇಳಿದರು.

ಇದರಂತೆ ಜಿಲ್ಲಾ, ತಾಲೂಕು, ಪುರಸಭೆ ಮಟ್ಟದಲ್ಲಿ ಆಡಳಿತ, ಚುನಾಯಿತ ಪ್ರತಿನಿಧಿಗಳು, ಗಣ್ಯವ್ಯಕ್ತಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಭಾಗವಹಿಸಿಕೊಂಡು ಪಾದಯಾತ್ರೆ ಮೂಲಕ ಕಾರ್ಯಕ್ರಮ ನಡೆಸಲು ಸೂಚಿಸಲಾಗಿದೆ. ಪಾದಯಾತ್ರೆಯಲ್ಲಿ 50 ಜನರನ್ನು ಮೀರಿ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಜನರು ಭಾಗಿಯಾಗಬಾರದು. ಪಾದಯಾತ್ರೆಯಲ್ಲಿ ಭಾಗಿಯಾಗುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಲಾಗಿದೆ.

ಜೊತೆಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ಬಳಕೆ ಜೊತೆಗೆ ಇದರ ಅಗತ್ಯತೆಯ ಕುರಿತಾಗಿ ಜನರಿಗೆ ಮಾಹಿತಿ ನೀಡಲು ಫಲಕಗಳನ್ನು ಬಳಸಬೇಕು ಎಂದು ಹೇಳಿದರು.

ABOUT THE AUTHOR

...view details