ಕರ್ನಾಟಕ

karnataka

ETV Bharat / state

CCTV Video: ಚಿಂತಾಮಣಿ ಮಾರುಕಟ್ಟೆಯಲ್ಲಿ ಟೊಮೆಟೊ ಕದ್ದ ಖಾಕಿ ಸಮವಸ್ತ್ರಧಾರಿ - chintamani apmc market

ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಖಾಕಿ ಸಮವಸ್ತ್ರ ಧರಿಸಿದ ವ್ಯಕ್ತಿಯೋರ್ವ ಟೊಮೆಟೊ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

tomato theft
ಚಿಂತಾಮಣಿ ಮಾರುಕಟ್ಟೆಯಲ್ಲಿ ಟೊಮೆಟೊ ಕಳ್ಳತನ

By

Published : Dec 10, 2021, 2:12 AM IST

Updated : Dec 10, 2021, 8:42 AM IST

ಚಿಕ್ಕಬಳ್ಳಾಪುರ:ಜಿಲ್ಲೆಯ ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಯಲ್ಲಿ ಖಾಕಿ ಸಮವಸ್ತ್ರ ಧರಿಸಿದ ವ್ಯಕ್ತಿಯೋರ್ವ ಟೊಮೆಟೊ ಕಳ್ಳತನ ಮಾಡುತ್ತಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ನಗರದ ಎಪಿಎಂಸಿ ಮಾರುಕಟ್ಟೆಯ ಟೊಮೆಟೊ ಮಾರ್ಕೆಟ್‍ನಲ್ಲಿ ಬೆಳಿಗ್ಗೆ ಹರಾಜು ಮಾಡಲು ರೈತರೊಬ್ಬರು ಕ್ರೇಟ್‍ಗಳನ್ನು ದಾಸ್ತಾನು ಮಾಡಿದ್ದರು. ಕ್ರೇಟ್‍ಗಳಿಗೆ ಹೊದಿಕೆಯಿಂದ ಮುಚ್ಚಿದ್ದರು. ಆದರೆ ರಾತ್ರಿ ವೇಳೆ ಖಾಕಿ ಸಮವಸ್ತ್ರ ಧರಿಸಿರುವ ವ್ಯಕ್ತಿ ಹಾಗೂ ಇನ್ನೋರ್ವ ಸೇರಿಕೊಂಡು ಕಳ್ಳತನಕ್ಕೆ ಇಳಿದಿದ್ದಾರೆ. ಮಾರುಕಟ್ಟೆ ಸಿಬ್ಬಂದಿ ನಿದ್ರೆಗೆ ಜಾರಿದ ವೇಳೆ ಇಬ್ಬರು ಕರಾಮತ್ತು ತೋರಿದ್ದಾರೆ.

ಚಿಂತಾಮಣಿ ಮಾರುಕಟ್ಟೆಯಲ್ಲಿ ಟೊಮೆಟೊ ಕದ್ದ ಖಾಕಿ ಸಮವಸ್ತ್ರಧಾರಿ

ಕಳೆದ 10 ದಿನಗಳ‌ ಹಿಂದೆ ಟೊಮೆಟೊ ಕದಿಯುತ್ತಿದ್ದ ವ್ಯಕ್ತಿಯನ್ನು ಹಿಡಿದು ಬುದ್ಧಿವಾದ ಹೇಳಿ ಕಳುಹಿಸಲಾಗಿತ್ತು. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಚಿಂತಾಮಣಿ ನಗರ ಠಾಣೆ ವ್ಯಾಪ್ತಿಯಲ್ಲಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ:ಮಂಗಳೂರು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ​​: ಆರೋಪಿ ನ್ಯಾಯವಾದಿಯ ಪತ್ನಿ ಸಹಿತ ಮತ್ತೋರ್ವನ ಬಂಧನ, ಜಾಮೀನು

Last Updated : Dec 10, 2021, 8:42 AM IST

ABOUT THE AUTHOR

...view details