ಕರ್ನಾಟಕ

karnataka

ETV Bharat / state

ವೀಕೆಂಡ್ ಹಿನ್ನೆಲೆ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಲ್ಲಿ‌ ಮುಳುಗಿ ಸಾವು - ಈಟಿವಿ ಭಾರತ ಕನ್ನಡ

ಬೆಂಗಳೂರು ಖಾಸಗಿ ಕಾಲೇಜಿನ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

three-students-drowned-in-chikkaballapura
ನೀರಿನಲ್ಲಿ‌ ಮುಳುಗಿ ಮೂವರು ವಿದ್ಯಾರ್ಥಿಗಳು‌ ದಾರುಣ ಸಾವು

By

Published : Apr 1, 2023, 6:08 PM IST

ಚಿಕ್ಕಬಳ್ಳಾಪುರ: ವಿಕೇಂಡ್​ನಲ್ಲಿ ಮೋಜು ಮಸ್ತಿ ಮಾಡಲು ಹೋಗಿ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ಬಳಿ‌ ನಡೆದಿದೆ. ಮೃತರನ್ನು ಬೆಂಗಳೂರಿನ ಖಾಸಗಿ ಕಾಲೇಜಿನ ಬಿ.ಫಾರ್ಮ್ ವಿದ್ಯಾರ್ಥಿಗಳಾದ ಸಾರಾಯಿಪಾಳ್ಯದ ರಾಧಿಕಾ (21), ಇಮ್ರಾನ್ (21), ಪೂಜಾ (21) ಎಂದು ಗುರುತಿಸಲಾಗಿದೆ.

ವೀಕೆಂಡ್ ಹಿನ್ನೆಲೆ ಮೂರು ಬೈಕ್​​ಗಳಲ್ಲಿ ಚಿಕ್ಕಬಳ್ಳಾಪುರದ ಜಲಾಶಯಕ್ಕೆ ಆಗಮಿಸಿದ್ದ 6 ಜನ ವಿದ್ಯಾರ್ಥಿಗಳು, ಶ್ರೀನಿವಾಸ ಸಾಗರ ಜಲಾಶಯದಲ್ಲಿ ಈಜಾಡಲು ಮುಂದಾಗಿದ್ದರು. ಈ ವೇಳೆ ಈಜು ಬಾರದೇ ಮೂವರು ವಿದ್ಯಾರ್ಥಿಗಳು‌ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಪೊಲೀಸರು‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಮೃತದೇಹಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ. ಸದ್ಯ ಪೂಜಾ ಮೃತದೇಹ ಸಿಕ್ಕಿದ್ದು, ರಾಧಿಕಾ ಹಾಗೂ ಇಮ್ರಾನ್ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಬಂಟ್ವಾಳ: ಡೆಲಿವರಿ ನೀಡಲು ಬಂದವನ ಹಲ್ಲೆ, ದಾಖಲೆಗಳಿಲ್ಲದೆ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ

ABOUT THE AUTHOR

...view details