ಚಿಕ್ಕಬಳ್ಳಾಪುರ:ಕೋರ್ಟ್‌ನಲ್ಲಿ ವಿಚ್ಛೇದನಕ್ಕೆಂದು ಅರ್ಜಿ ಹಾಕಿದ್ದ ಮೂರು ಜೋಡಿಗಳನ್ನು ನ್ಯಾಯಮೂರ್ತಿಗಳು ಮತ್ತೆ ಒಂದುಗೂಡಿಸಿದ ಪ್ರಸಂಗ ನಗರದಲ್ಲಿ ನಡೆದ ಲೋಕ ಅದಾಲತ್ನಲ್ಲಿ ಶನಿವಾರ ನಡೆದಿದೆ.
ವಿಚ್ಛೇದನಕ್ಕೆಂದು ಆಶಾ-ವಿನೋದ್ ಕುಮಾರ್, ದೀಪಾ-ರಮೇಶ್, ಉಷಾ ಜಿ-ಮುನಿರಾಜು ಎಂಬುವವರು ಲೋಕ ಅದಾಲತ್ ಕಾರ್ಯಕ್ರಮಕ್ಕೆ ಬಂದಿದ್ದರು. ವಿಚಾರಣೆಯನ್ನು ನಡೆಸಿದ ನ್ಯಾ.ಲಕ್ಷ್ಮೀಕಾಂತ್ ಜೆ.ಮಿಸ್ಕಿನ್ ಹಾಗೂ ನ್ಯಾ.ವಿವೇಕಾನಂದ ಪಂಡಿತ್ ಹಾಗೂ ನ್ಯಾ.ಅರುಣಾಕುಮಾರಿ ಅವರು ಜೋಡಿಗಳ ಬಳಿ ಮಾಹಿತಿ ಪಡೆದು ಬುದ್ದಿವಾದ ಹೇಳಿದರು. ಇದರಿಂದ ಮನ ಬದಲಿಸಿದ ಮೂವರು ದಂಪತಿಗಳು ನ್ಯಾಯಾಧೀಶರ ಸಮ್ಮುಖದಲ್ಲೇ ಮತ್ತೆ ಹಾರ ಬದಲಿಸಿಕೊಳ್ಳುವುದರ ಮೂಲಕ ಒಂದಾದರು. ಅಲ್ಲದೇ, ಸಿಹಿ ತಿನಿಸಿ ನಗು ಬೀರಿದರು.
ದಂಪತಿಗಳ ಹಿನ್ನೆಲೆ: ಗೌರಿಬಿದನೂರು ತಾಲೂಕಿನ ದೇವರಕೊಂಡಹಳ್ಳಿ ಗ್ರಾಮದ ಮುನಿರಾಜು ಹಾಗೂ ಬೆಂಗಳೂರು ಮೂಲದ ಉಷಾ ಜಿ ಹಾಗೂ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇಬ್ಬರ ಮಧ್ಯೆ ಉಂಟಾದ ಮೈನಸ್ಸಿನಿಂದ ವಿಚ್ಛೇದನಕ್ಕೆ ಪತ್ನಿ ಉಷಾ ಅರ್ಜಿ ಸಲ್ಲಿಸಿದ್ದರು.