ಚಿಕ್ಕಬಳ್ಳಾಪುರ:30 ವರ್ಷಗಳ ನಂತರ ತುಂಬಿಕೋಡಿ ಹರಿಯುತ್ತಿರುವ ಕೆರೆಯೊಂದರಲ್ಲಿ ಈಜಲು ಹೋದ ಮೂವರು ಬಾಲಕರು ನೀರು ಪಾಲಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೋಡೇಗಂಡ್ಲು ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಸಂಜೆ 5 ಗಂಟೆಯ ಸಮಯದಲ್ಲಿ ಮೂವರು ಮಕ್ಕಳು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಮೃತರು ರಾಮ, ಲಕ್ಷ್ಮಣ, ಪ್ರಜ್ವಲ್ ಎಂಬ ಹತ್ತು ವರ್ಷದ ಬಾಲಕರು ಎಂದು ಗುರುತಿಸಲಾಗಿದೆ
ಶಾಲೆಯಿಂದ ಬರುತ್ತಿರುವಾಗ ಕೆರೆಯಲ್ಲಿ ಈಜಲು ಹೋಗಿ ಮೂರು ಬಾಲಕರು ನೀರುಪಾಲು!
ಶಾಲೆಯಿಂದ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಕೆರೆಗೆ ಈಜಲು ಹೋದ 10 ವರ್ಷದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಸಂಜೆ ಶಾಲೆ ಮುಗಿಸಿಕೊಂಡು ಕೆರೆಯ ಬಳಿ ಆಟ ಆಡಲು ಹೋಗಿರುವ ಸಂದರ್ಭದಲ್ಲಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಒಂದು ಕಡೆ ಸುಮಾರು ಮೂವತ್ತು ವರ್ಷಗಳ ನಂತರ ಕೆರೆ ತುಂಬಿದ್ದ ಸಂಧರ್ಭ ಗ್ರಾಮದಲ್ಲಿ ಸಂತಸ ಏರ್ಪಟ್ಟಿತ್ತು. ಮತ್ತೊಂದು ಕಡೆ ಕೆರೆಗೆ ಬಿದ್ದು ಮೂವರ ಬಾಲಕರು ಸಾವನ್ನಪ್ಪಿರುವುದು ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ತಮ್ಮ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನೂ ಘಟನೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ:ಈಜಲು ಬಾವಿಗೆ ಇಳಿದ ಇಬ್ಬರು ಮಕ್ಕಳು ನೀರುಪಾಲು.. ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ