ಚಿಕ್ಕಬಳ್ಳಾಪುರ: ಜಿಂಕೆ ಮಾಂಸ (Venison) ಕತ್ತರಿಸುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ಚಿಕ್ಕಬಳ್ಳಾಪುರದ ಆರೂರು ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ವೆಂಕಟೇಶಪ್ಪ (65), ರಾಜಣ್ಣ (55), ವೆಂಕಟೇಶ್ (35) ಬಂಧಿತರು. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ 10 ಕೆ.ಜಿ. ಜಿಂಕೆ ಮಾಂಸ ಸಮೇತ ಆರೋಪಿಗಳನ್ನು ಬಂಧಿಸಿದೆ. ಈ ವೇಳೆ, ಇನ್ನಿಬ್ಬರು ಆರೋಪಿಗಳಾದ ಸುಶೀಲಮ್ಮ ಮತ್ತು ವೆಂಕಟಲಕ್ಷ್ಮಮ್ಮ ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.