ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಕಂಗೆಟ್ಟ ವ್ಯಸನಿಗಳಿಂದ ಬಾರ್​​ ಗೋಡೆಗೆ ಕನ್ನ, ಕೈಗೆ ಸಿಕ್ಕಷ್ಟು ಮದ್ಯ ದೋಚಿ ಪರಾರಿ

ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಬಾಲಾಜಿ ಟಾಕೀಸ್ ಮುಂಭಾಗ ಇರುವ ಬಾಲಾಜಿ ವೈನ್ ಶಾಪ್ ಗೋಡೆ ಕೊರೆದಿರುವ ದುಷ್ಕರ್ಮಿಗಳು ಕೈಗೆ ಸಿಕ್ಕಷ್ಟು ಮದ್ಯ ದೋಚಿ ಪರಾರಿಯಾಗಿದ್ದಾರೆ.

Thieves Theft alcohal
ಬಾರ್ ಗೋಡೆ ಕೊರೆದು ಮದ್ಯ‌ ಕಳವು.

By

Published : Apr 15, 2020, 1:34 PM IST

ಚಿಕ್ಕಬಳ್ಳಾಪುರ: ಲಾಕ್​ಡೌನ್​ನಿಂದಾಗಿ ‌ಮದ್ಯ ಸಿಗದೆ ಕಂಗಾಲಾಗಿದ್ದ ಕುಡುಕರು ಎಣ್ಣೆಗಾಗಿ ಬಾರ್​ ಗೋಡೆ ಕೊರೆದು ಅಪಾರ ಪ್ರಮಾಣದ ಮದ್ಯ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಬಿಬಿ ರಸ್ತೆಯ ಬಾಲಾಜಿ ಟಾಕೀಸ್ ಮುಂಭಾಗ ಇರುವ ಬಾಲಾಜಿ ವೈನ್ ಶಾಪ್ ಗೋಡೆ ಕೊರೆದಿರುವ ದುಷ್ಕರ್ಮಿಗಳು ಕೈಗೆ ಸಿಕ್ಕಷ್ಡು ಮದ್ಯ ದೋಚಿ ಪರಾರಿಯಾಗಿದ್ದಾರೆ.

ವಿಷಯ ತಿಳಿದ ಚಿಕ್ಕಬಳ್ಳಾಪುರ ‌ನಗರ ಠಾಣೆಯ ಪೊಲೀಸರು ಮತ್ತು ಅಬಕಾರಿ ಸಿಬ್ಬಂದಿ ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details