ಕರ್ನಾಟಕ

karnataka

ETV Bharat / state

ಕಳವು ಮಾಡಿದ್ದ ಪ್ರದೇಶದಲ್ಲಿ ಟೀ ಕುಡಿಯಲು ಬಂದು ಸಿಕ್ಕಿಬಿದ್ದ ಖದೀಮರು! - ವಿಚಾರಣೆ ನಡೆಸಿದ ವೇಳೆ ಕಳ್ಳತನ ಪ್ರಕರಣ

ನೆರೆಯ ರಾಜ್ಯ ಆಂಧ್ರ ಪ್ರದೇಶದ ಹಿಂದುಪುರ ಮೂಲದ ಶೇಲ್ ಇಲಿಯಾಜ್ ಬಿನ್ ಅಮೀರ್ ಬಾಷಾ (33) ಹಾಗೂ ಎಸ್ ನಿಜಾಂ ಬಿನ್ ನಿಸಾರ್ ಅಹಮದ್ (24) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

thieves-came-to-drink-tea-in-stolen-area-surrender-news
ಕಳವು ಮಾಡಿದ್ದ ಪ್ರದೇಶದಲ್ಲಿ ಟೀ ಕುಡಿಯಲು ಬಂದು ಸಿಕ್ಕಿಬಿದ್ದ ಖದೀಮರು

By

Published : Dec 19, 2020, 7:53 PM IST

ಚಿಕ್ಕಬಳ್ಳಾಪುರ: ಬಂಗಾರದ ಒಡವೆಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳು, ವರ್ಷದ ನಂತರ ಅದೇ ಸ್ಥಳದಲ್ಲಿ ಟೀ ಕುಡಿಯಲು ಬಂದು ಪೊಲೀಸರ ಅತಿಥಿಯಾದ ಘಟನೆ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ನಡೆದಿದೆ.

ನೆರೆಯ ರಾಜ್ಯ ಆಂಧ್ರ ಪ್ರದೇಶದ ಹಿಂದುಪುರ ಮೂಲದ ಶೇಲ್ ಇಲಿಯಾಜ್ ಬಿನ್ ಅಮೀರ್ ಬಾಷಾ (33) ಹಾಗೂ ಎಸ್ ನಿಜಾಂ ಬಿನ್ ನಿಸಾರ್ ಅಹಮದ್ (24) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.

ಓದಿ: ಉಡುಪಿ ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿವೆ ಕಳ್ಳತನ ಪ್ರಕರಣ

ಕಳೆದ 2019ರ ನವೆಂಬರ್‌ನಲ್ಲಿ ನಗರದ ಕೆಎಸ್ಆರ್‌ಟಿಸಿ ಚಾಲಕ ಸತೀಶ್ ಎಂಬುವರ ಮನೆಯಲ್ಲಿ ಬಂಗಾರದ ಒಡವೆಗಳು ಸೇರಿದಂತೆ ನಗದನ್ನು ದೋಚಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 407/380 ಅಡಿಯಲ್ಲಿ ದೂರು ದಾಖಲಾಗಿತ್ತು.

ಕಳೆದ ದಿನವಷ್ಟೇ ನಗರಕ್ಕೆ ಬಂದು ಟೀ ಕುಡಿಯುವ ವೇಳೆ ಗಸ್ತಿನಲ್ಲಿದ್ದ ಪಿಎಸ್ಐ ಕಣ್ಣಿಗೆ ಅನುಮಾನಾಸ್ಪದವಾಗಿ ಕಂಡು ಬಂದಿದ್ದು, ವಿಚಾರಿಸಿದ ವೇಳೆ ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಹಿಡಿದು ವಿಚಾರಣೆ ನಡೆಸಿದ ವೇಳೆ ಕಳ್ಳತನ ಪ್ರಕರಣ ಬಯಲಾಗಿದೆ.

ಸದ್ಯ ಆರೋಪಿಗಳಿಂದ 2,33,000 ರೂ. ನಗದನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಲಯಕ್ಕೆ ಒಪ್ಪಿಸಿದ್ದಾರೆ.

ABOUT THE AUTHOR

...view details