ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಇದ್ದವರಿಂದ ಯಾವುದೇ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿಲ್ಲ. ಎಲ್ಲಾ ಪ್ರಕರಣಗಳು ಹೊರ ರಾಜ್ಯಗಳಿಂದ ಬಂದವರಿಂದಾಗಿ ಸೋಂಕು ಪ್ರಕರಣಗಳು ಏರಿಕೆಯಾಗಿವೆ ಎಂದು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಹೊರ ರಾಜ್ಯಗಳಿಂದ ಬಂದವರಿಗೆಲ್ಲರಿಗೂ ಕ್ವಾರಂಟೈನ್: ಸಚಿವ ಮಾಧುಸ್ವಾಮಿ - chikkaballapura news
ಕೊರೊನಾ ಪಾಸಿಟಿವ್ ಪ್ರಕರಣಗಳು ಕರ್ನಾಟಕದಲ್ಲಿ ಇದ್ದವರಿಂದ ಇಲ್ಲ. ಎಲ್ಲಾ ಪ್ರಕರಣಗಳು ಹೊರರಾಜ್ಯಗಳಿಂದ ಬಂದವರಿಂದ ಏರಿಕೆ ಆಗುತ್ತೀವೆ ಎಂದು ರಾಜ್ಯ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ
ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ
ಪಾಸಿಟಿವ್ ಪ್ರಕರಣಗಳು ಕರ್ನಾಟಕದಲ್ಲಿ ಇದ್ದವರಿಂದ ಬಂದಿಲ್ಲ. ಮಹಾರಾಷ್ಟ್ರ, ಕೇರಳ, ಗುಜರಾತ್ ಸೇರಿದಂತೆ ಇತರೆ ರಾಜ್ಯಗಳಿಂದ ವಾಪಸ್ ಬಂದವರಿಂದ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಸದ್ಯ ಎಲ್ಲರ ತಪಾಸಣೆ ನಡೆಸಲಾಗುತ್ತಿದ್ದು, ಪಾಸಿಟಿವ್ ಇರುವವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದರು.
ಎತ್ತಿನಹೊಳೆ ನೀರಾವರಿ ಯೋಜನೆ ಎರಡು ವರ್ಷಗಳಲ್ಲಿ ಬರಲಿದೆ ಎಂದು ತಾಲೂಕಿನ ಕುರುಟಹಳ್ಳಿ ಬಳಿ ಕೆಸಿ ವ್ಯಾಲಿ ನೀರಾವರಿಯ ಡಿಸಿ ಪಾಯಿಂಟ್ ಪರಿವೀಕ್ಷಣೆ ವೇಳೆ ಹೇಳಿದರು.
Last Updated : May 20, 2020, 8:56 PM IST