ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ಮಗನೇ ತಂದೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಗೌರಿಬಿದನೂರು ತಾಲೂಕಿನ ಚೆನ್ನಬೈರೇನಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ.
ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ತಂದೆಯನ್ನೇ ಚಾಕುವಿನಿಂದ ಇರಿದು ಕೊಂದ ಮಗ - The son who stabbed and killed his father with a knife
ಕುಡಿದ ಅಮಲಿನಲ್ಲಿ ತಂದೆಯ ಬೆನ್ನಿಗೆ ಚಾಕುವಿನಿಂದ ಇರಿದು ಮಗನೇ ಕೊಲೆ ಮಾಡಿರುವ ಘಟನೆ ಗೌರಿಬಿದನೂರು ತಾಲೂಕಿನ ಚೆನ್ನಬೈರೇನಹಳ್ಳಿಯಲ್ಲಿ ನಡೆದಿದೆ.
![ಚಿಕ್ಕಬಳ್ಳಾಪುರ: ಕುಡಿದ ಅಮಲಿನಲ್ಲಿ ತಂದೆಯನ್ನೇ ಚಾಕುವಿನಿಂದ ಇರಿದು ಕೊಂದ ಮಗ murder](https://etvbharatimages.akamaized.net/etvbharat/prod-images/768-512-10657658-thumbnail-3x2-lek.jpg)
ಮುನೇಗೌಡ (48) ಕೊಲೆಗೀಡಾದ ವ್ಯಕ್ತಿ. ಮಂಜುನಾಥ್ (22) ಕೊಲೆ ಮಾಡಿರುವ ಆರೋಪಿ. ಪ್ರತಿನಿತ್ಯ ಮಂಜುನಾಥ್ ಕುಡಿದು ಬಂದು ಗ್ರಾಮದಲ್ಲಿ ಹಾಗೂ ಮನೆಯಲ್ಲಿ ಕ್ಷುಲ್ಲಕ ವಿಷಯಕ್ಕೆ ಜಗಳವಾಡುತ್ತಿದ್ದನು. ಕಳೆದ ದಿನ ತಂದೆ ಮುನೇಗೌಡ ಮಗನಿಗೆ ಬುದ್ಧಿ ಹೇಳುವ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ತಾರಕಕ್ಕೇರಿತ್ತು. ಜಗಳ ಬಿಡಿಸಲು ಬಂದ ತಾಯಿಯನ್ನು ಮನೆಯಿಂದ ಹೊರಹಾಕಿ, ತಂದೆಯ ಬೆನ್ನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಡಿವೈಎಸ್ಪಿ ರವಿಶಂಕರ್, ವೃತ್ತ ನಿರೀಕ್ಷಕ ಶಶಿಧರ್, ಪಿಎಸ್ಐ ಲಕ್ಷ್ಮಿ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.