ಚಿಕ್ಕಬಳ್ಳಾಪುರ:ಜಿಲ್ಲೆಗೆ ಕೋಟ್ಯಂತರ ರೂಪಾಯಿ ಆದಾಯ ತಂದು ಕೊಡುತ್ತಿರುವ ಚಿಂತಾಮಣಿ ನಗರ ಈಗ ದುರಸ್ತಿಗಳ ನಗರವಾಗುತ್ತಿದೆ.
ಮುರಿದ ಸ್ಥಿತಿಯಲ್ಲಿರುವ ವಿದ್ಯುತ್ ಕಂಬ ಹೌದು ಈಗಾಗಲೇ ವಿದ್ಯುತ್ ಕಂಬಗಳು, ಲೈನ್ಗಳು ಅಪಾಯದ ಸ್ಥಿತಿಯಲ್ಲಿದ್ದು, ಕೆಲವರಿಗೆ ತಗುಲಿ ಸಾಕಷ್ಟು ಮಂದಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬರುತ್ತಲೇ ಇವೆ. ಆದರೆ, ಕೆಇಬಿ ಅಧಿಕಾರಿಗಳು ಮಾತ್ರ ನಮಗೇನೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಹೌದು ನಗರದ ಕೋಲಾರದ ಮುಖ್ಯ ರಸ್ತೆಯ, ಶ್ರೀನಿವಾಸಪುರದಲ್ಲಿ ಇಂತಹ ವಿದ್ಯುತ್ ಕಂಬಗಳು ಮುರಿದು ಸ್ಥಿತಿಯಲ್ಲಿದ್ದು, ಪ್ರಾಣ ಬಲಿಗಾಗಿ ಕಾಯುತ್ತಿದ್ದರೂ ಅಧಿಕಾರಿಗಳು ಮಾತ್ರ ಸರಿಪಡಿಸುವ ನೆಪವೊಡ್ಡುತ್ತಿದ್ದಾರೆ. ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು, ಸಾರ್ವಜನಿಕರು ಓಡಾಟ ನಡೆಸುವ ಹಾಗೂ ಸಂಜೆಯ ನಂತರ ತಿಂಡಿ - ತಿನಸುಗಳ ಅಂಗಡಿಗಳನ್ನು ಹಾಕುವ ರಸ್ತೆ ಇದಾಗಿದೆ. ಸದ್ಯ ಇಲ್ಲಿ ಓಡಾಟ ನಡೆಸುವವರಂತೂ ತಮ್ಮ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಾಟ ನಡೆಸಬೇಕಾಗಿದೆ.
ಸದ್ಯ ಕಳೆದ ಆರು ತಿಂಗಳಿನಿಂದ ವಿದ್ಯುತ್ ಕಂಬ ಮುರಿದಿದ್ದು, ಬೀಳುವ ಹಂತದಲ್ಲಿದ್ದು ಸಾಕಷ್ಟು ಸಲ ಅಧಿಕಾರಿಗಳ ಗಮನಕ್ಕೆ ತಂದರೂ ನೋ ಯೂಸ್ ಎನ್ನುವಂತಾಗಿದೆ.