ಕರ್ನಾಟಕ

karnataka

ETV Bharat / state

ಯೋಧನ ಕರೆಗೆ ಸ್ಪಂದಿಸಿದ ಗೌರಿಬಿದನೂರು ಅಧಿಕಾರಿಗಳು - Gauribidanur taluk corona effect

ಯೋಧನ ಕರೆಗೆ ಗೌರಿಬಿದನೂರು ತಾಲೂಕಿನ ಅಧಿಕಾರಿಗಳು ಸ್ಪಂದಿಸಿ ಯೋಧನ ಗರ್ಭಿಣಿ ಪತ್ನಿಗೆ ಔಷಧ ತರಿಸಿಕೊಟ್ಟು ಕುಟುಂಬಕ್ಕೆ ನೆರವಾಗಿದ್ದಾರೆ.

chikkaballapura
ಯೋಧನ ಕರೆಗೆ ಸ್ಪಂಧಿಸಿದ ಅಧಿಕಾರಿಗಳು

By

Published : Mar 30, 2020, 10:33 PM IST

ಚಿಕ್ಕಬಳ್ಳಾಪುರ: ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ತನ್ನ ಗರ್ಭಿಣಿ ಪತ್ನಿಗೆ ಔಷಧ ತರಿಸಿ ಕೊಡಲು ಮನವಿ ಮಾಡಿದ್ದು, ಅವರ ಕರೆಗೆ ಗೌರಿಬಿದನೂರು ತಾಲೂಕಿನ ಅಧಿಕಾರಿಗಳು ಸ್ಪಂದಿಸಿ ಕುಟುಂಬದ ನೆರೆವಿಗೆ ಧಾವಿಸಿದ್ದಾರೆ.

ಯೋಧನ ಕರೆಗೆ ಸ್ಪಂಧಿಸಿದ ಗೌರಿಬಿದನೂರು ಅಧಿಕಾರಿಗಳು

ತಾಲೂಕಿನ ಹುದುಗೂರು ಗ್ರಾಮದ ರಾಮು ಜಮ್ಮು ಕಾಶ್ಮೀರದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದು, ತಾಲೂಕಿನ EO ಮುನಿರಾಜುಗೆ ಕರೆ ಮಾಡಿ ಪತ್ನಿ ಶ್ರಾವಂತಿ ಗರ್ಭಿಣಿಯಾಗಿದ್ದು, ಅವರಿಗೆ ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಔಷಧ ತರಿಸಲು ವ್ಯವಸ್ಥೆ ಮಾಡಲು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಯೋಧನ ಮನವಿಯಂತೆ ಗ್ರಾಮ ಪಂಚಾಯಿತಿ ಪಿಡಿಒ ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಂದ ವಿವರಗಳನ್ನು ಪಡೆದು ಬೆಂಗಳೂರಿನಿಂದ ಔಷಧ ತರಿಸಲು ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಕಳುಹಿಸಿ ಔಷದ ಒದಗಿಸಿಕೊಟ್ಟಿದ್ದಾರೆ.

ಇನ್ನು ತಾಲೂಕು ಅಧಿಕಾರಿಗಳ ಕೆಲಸಕ್ಕೆ ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details