ಚಿಕ್ಕಬಳ್ಳಾಪುರ: WWE ಸೂಪರ್ ಸ್ಟಾರ್, ಕುಸ್ತಿಪಟು ದಿ ಗ್ರೇಟ್ ಖಲಿ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮಕ್ಕೆ ಭೇಟಿ ನೀಡಿದ್ದು, ದೈತ್ಯ ಸೂಪರ್ ಸ್ಟಾರ್ ನೋಡಲು ಅಭಿಮಾನಿಗಳು ಮುಗಿಬಿದ್ದರು.
ಚಿಕ್ಕಬಳ್ಳಾಪುರಕ್ಕೆ ಬಂದ 'ದಿ ಗ್ರೇಟ್ ಖಲಿ'... ನೆಚ್ಚಿನ ಕುಸ್ತಿಪಟು ನೋಡಲು ಅಭಿಮಾನಿಗಳ ನೂಕುನುಗ್ಗಲು! - great Khali in chikkaballapur
ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮದಲ್ಲಿನ ಮದುವೆ ಮನೆಯಲ್ಲಿ ಕುಸ್ತಿಪಟು ದಿ ಗ್ರೇಟ್ ಖಲಿ ನೋಡಲು ಸಾವಿರಾರು ಮಂದಿ ಜಮಾಯಿಸಿದ್ದರು.
ಅಲ್ಲೀಪುರ ಗ್ರಾಮದ ಉದ್ಯಮಿ ಹಸನ್ ರಾಜಾ ಪುತ್ರಿಯ ವಿವಾಹ ಹಾಗೂ ಹಸನ್ ರಾಜಾರ ಮನೆಯ ಗೃಹ ಪ್ರವೇಶದ ಕಾರ್ಯಕ್ರಮಕ್ಕೆ ಗ್ರೇಟ್ ಖಲಿ ಆಗಮಿಸಿದ್ದರು. ಅವರನ್ನ ನೋಡಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ರು. ಗ್ರೇಟ್ ಖಲಿ ಆಗಮನಕ್ಕೆ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಬರಮಾಡಿಕೊಂಡಿದ್ದು, ಸುಮಾರು ಐದು ಸಾವಿರಕ್ಕೂ ಅಧಿಕ ಅಭಿಮಾನಿಗಳು ಭಾಗಿಯಾಗಿದ್ದರು.
ಈ ವೇಳೆ ಮಾತಾನಾಡಿದ ಗ್ರೇಟ್ ಖಲಿ, ಹಸನ್ ರಜಾ ಅವರ ಮಗಳ ಮದುವೆಗೆ ಬಂದಿರುವುದು ಸಾಕಷ್ಟು ಸಂತಸ ತಂದಿದೆ. ಮದುವೆಯ ಆಮಂತ್ರಣ ಸಿಕ್ಕಾಗ ನನ್ನ ಸ್ನೇಹಿತನ ಬಳಿ ನಾನು ಬೆಂಗಳೂರಿಗೆ ಮದುವೆಗೆ ಹೋಗುತ್ತಿದ್ದೇನೆಂದು ಹೇಳಿದೆ. ಇಲ್ಲಿಗೆ ಬಂದ ಮೇಲೆ ನೀವು ನೀಡಿರುವ ಪ್ರೀತಿ-ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದು,ಎಂದಿಗೂ ಮರೆಯುವುದಿಲ್ಲ ಎಂದರು.