ತಂದೆಯಿಂದ ಮಗನಿಗೂ ತಗುಲಿದ ಸೋಂಕು, ಚಿಕ್ಕಬಳ್ಳಾಪುರದಲ್ಲಿ 24 ಪಾಸಿಟಿವ್ ಪ್ರಕರಣ - ಹಸಿರು ವಲಯದಲ್ಲಿದ್ದ ಚಿಂತಾಮಣಿ ನಗರ
ಇತ್ತೀಚೆಗಷ್ಟೇ ಹಸಿರು ವಲಯದಲ್ಲಿದ್ದ ಚಿಂತಾಮಣಿ ನಗರದಲ್ಲಿ ಈಗ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು ಮತ್ತೊಂದು ಪ್ರಕರಣ ದಾಖಲಾಗಿದೆ.
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು ಮತ್ತೊಂದು ಸೋಂಕು ಧೃಢಪಟ್ಟಿದ್ದು, ಇಲ್ಲಿಯವರೆಗೆ ಒಟ್ಟು 24 ಪ್ರಕರಣ ದಾಖಲಾಗಿದೆ.
ಇತ್ತೀಚೆಗಷ್ಟೇ ಹಸಿರು ವಲಯದಲ್ಲಿದ್ದ ಚಿಂತಾಮಣಿ ನಗರದಲ್ಲಿ ಈಗ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಂದು ಮತ್ತೊಂದು ಪ್ರಕರಣ ದಾಖಲಾಗಿದೆ. ಪಿ -790 ಸಂಪರ್ಕದಲ್ಲಿದ್ದ ಮೊಮ್ಮಗನಿಗೂ ಕೊರೊನಾ ಸೋಂಕು ತಗುಲಿದ್ದು, ಇಂದು ಪಿ-864, 46 ವರ್ಷದ ಮಗನಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ನಗರದಲ್ಲಿ ಮೂರು ಸೋಂಕಿತರು ಪತ್ತೆಯಾಗಿದ್ದು, ನಗರದ ಐಸೋಲೇಶನ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಸದ್ಯ 9 ಹಾಗೂ 10,11 ನೇ ವಾರ್ಡ್ಗಳನ್ನು ಸೀಲ್ಡೌನ್ ಮಾಡಲಾಗಿದ್ದು, ವಾರ್ಡ್‌ಗಳ ಜನತೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಸದ್ಯ ಜಿಲ್ಲೆಯಲ್ಲಿ ಒಟ್ಟು ಸೋಂಕಿತರು 24 ಕ್ಕೆ ಏರಿಕೆ ಕಂಡಿದ್ದು, ಇದರಲ್ಲಿ 16 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ, ಇನ್ನು ಗೌರಿಬಿದನೂರು ಹಾಗೂ ನಗರದಲ್ಲಿ ಒಬ್ಬ ಸೋಂಕಿತ ಮೃತ ಪಟ್ಟಿದ್ದಾರೆ.