ಚಿಕ್ಕಬಳ್ಳಾಪುರ: ಬಿಜೆಪಿ ಪಕ್ಷ ಶಿಸ್ತು ಬದ್ಧ ಪಕ್ಷ. ಕಾಂಗ್ರೆಸ್ ಪಕ್ಷದ ನಾಯಕರು ಬಿಜೆಪಿಯವರನ್ನು ನೋಡಿ ಕಲಿಯಬೇಕಿದೆ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಕಾಂಗ್ರೆಸ್ ನಾಯಕರನ್ನು ಟೀಕಿಸಿದ್ದಾರೆ.
ನಗರದಲ್ಲಿ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ,ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವ ಸುಧಾಕರ್ ಕಾಂಗ್ರೆಸ್ ಪಕ್ಷದ ವಿರುದ್ದ ಕಿಡಿಕಾರಿದರು. ಮೊದಲು ಕಾಂಗ್ರೆಸ್ ಮುಖಂಡರು ಅವರವರ ಬಗ್ಗೆ ಅನುಕಂಪ ವ್ಯಕ್ತಪಡಿಸಬೇಕು.
ಪಕ್ಷದ ಅಧ್ಯಕ್ಷರು ಪಕ್ಷ ಪೂಜೆ ಮಾಡಿ ಎನ್ನುತ್ತಾರೆ. ಇನ್ನೂ ಮಾಜಿಮಂತ್ರಿ ಹೇಳುತ್ತಾರೆ ಸಿದ್ದರಾಮಯ್ಯನೇ ನಮ್ಮ ಮುಂದಿನ ಸಿಎಂ ಎಂದು ನಾನೂ ಸಮರ್ಥ ಇದ್ದೇನೆ ಎಂದು ಎಂಬಿ ಪಾಟೀಲ್ ಹೇಳುತ್ತಾರೆ.
ಜೊತೆಗೆ ಎಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಮುಂದೆ ಹೋಗೋಣಾ ಎಂದು ಪರಮೇಶ್ವರ್ ಸಾಹೇಬರು ಹೇಳುತ್ತಾರೆ. ಇಷ್ಟು ದ್ವಂದ್ವದಲ್ಲಿ ಸಿಲುಕಿರುವ ಜೇನುಗೂಡಲ್ಲಿ ಕಾಂಗ್ರೆಸ್ ಸಿಲುಕಿಕೊಂಡಿರುವಾಗ, ನಮ್ಮ ಪಕ್ಷದ ಉಸಾಬರೀ ನಿಮಗೆ ಯಾಕೇ ಎಂದು ಕಾಂಗ್ರೆಸ್ ನ್ನು ಪ್ರಶ್ನಿಸಿದರು.
ನಮ್ಮ ಪಕ್ಷ ಬಹಳ ಶಿಸ್ತಿನ ಪಕ್ಷ. ನಮ್ಮಲ್ಲಿ ಇಲ್ಲಿವರೆಗೂ ಸಿಎಂ ಬಗ್ಗೆ ಆಗಲಿ, ಮಾಜಿ ಸಿಎಂ ಬಗ್ಗೆ ಆಗಲಿ, ರಾಜ್ಯದಲ್ಲೇ ಆಗಲಿ ಕೇಂದ್ರದಲ್ಲೇ ಆಗಲಿ ಎಲ್ಲಾದರೂ ಅಪಸ್ವರ ಬಂದಿದೆಯೇ . ನಮ್ಮ ಪಕ್ಷ ನೋಡಿ ನೀವು ಕಲಿತುಕೊಳ್ಳಿ ಎಂದು ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.
ಕಾಂಗ್ರೆಸ್ ಪಕ್ಷದವರು ಬಿಜೆಪಿ ಪಕ್ಷವನ್ನು ನೋಡಿ ಕಲಿಯಬೇಕಿದೆ: ಸಚಿವ ಸುಧಾಕರ್ ಯಡಿಯೂರಪ್ಪ ರಾಜಕೀಯ ನಿವೃತ್ತಿ ವಿಚಾರ: ಯಡಿಯೂರಪ್ಪ ನಮ್ಮ ಹಿರಿಯ ನಾಯಕರಾಗಿದ್ದು, ಅವರು ಹುಟ್ಟು ಹೋರಾಟಗಾರರು. ಅವರು ಬಿಜೆಪಿ ಸಕ್ರಿಯ ರಾಜಕಾರಣದಲ್ಲಿ ನೂರಕ್ಕೆ ನೂರರಷ್ಟು ಇರುತ್ತಾರೆ. ಜನಪರ ರೈತಪರ ಕಾಳಜಿ ಹೊಂದಿದ್ದಾರೆ. ಅವರು ರಾಜಕೀಯದಲ್ಲಿ ಮುಂದುವರಿಯಬೇಕು ಎಂಬ ಒತ್ತಾಸೆ ನನಗೂ ಇದೆ.
ಇನ್ನು ವಿಜಯೇಂದ್ರ ಅವರಿಗೆ ಶಿಕಾರಿಪುರ ಬಿಟ್ಟುಕೊಟ್ಟಿರುವುದು ಅವರ ವೈಯಕ್ತಿಕ ವಿಷಯ. ವಿಜಯೇಂದ್ರ ಕೂಡ ಒಬ್ಬ ಉದಯೋನ್ಮುಖ ನಾಯಕ. ಆ ಕ್ಷೇತ್ರಕ್ಕೂ ಅವರಿಗೂ ವಿಶೇಷ ಅವಿನಾಭಾವ ಸಂಬಂಧವಿದೆ. ನಮ್ಮ ಪಕ್ಷಕ್ಕೆ ಯಡಿಯೂರಪ್ಪ ಬಗ್ಗೆ ಅರಿವಿದೆ. ಅವರ ಆಳವಾದ ಅನುಭವ, ನಮ್ಮ ಪಕ್ಷಕ್ಕೆ ಅವರ ಕೊಡುಗೆ ಏನಿದೆ ಎಂದು ತಿಳಿದಿದೆ ಎಂದು ಸಚಿವರು ಪ್ರತಿಕ್ರಿಯಿಸಿದರು.
ಓದಿ :ರಾಜ್ಯದಲ್ಲಿ ಇಂದು 1,456 ಮಂದಿಗೆ ಕೋವಿಡ್ ಸೋಂಕು ದೃಢ: ಕೋವಿಡ್ ಸಾವಿನ ಸಂಖ್ಯೆ ಶೂನ್ಯ