ಚಿಕ್ಕಬಳ್ಳಾಪುರ: ಗ್ಯಾರೇಜಿನಿಂದ ಕಾರೊಂದು ಹಿಮ್ಮುಖವಾಗಿ ಚಲಿಸುವಾಗ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ. ನಗರದ ಬೆಂಗಳೂರು ರಸ್ತೆಯ ಸಂತೋಷಿಮಾತ ದೇವಾಲಯದ ಎದುರು ಇರುವ ಸಲೀಂ ಎಂಬುವವರ ಗ್ಯಾರೇಜಿಗೆ ರಿಪೇರಿಗೆ ಬಂದಿದ್ದ ಕಾರನ್ನು ಹಿಮ್ಮುಖವಾಗಿ ಚಲಾಯಿಸುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕ ದಾಟಿ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು,ನಾಲ್ಕು ದ್ವಿಚಕ್ರವಾಹನಗಳು ಜಖಂಗೊಂಡಿದೆ.
ಗ್ಯಾರೇಜಿನಿಂದ ಹಿಮ್ಮುಖವಾಗಿ ಚಲಿಸಿದ ಕಾರು: ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ,ವಾಹನಗಳು ಜಖಂ
ಗ್ಯಾರೇಜಿನಿಂದ ಕಾರೊಂದು ಹಠಾತ್ ಹಿಮ್ಮುಖವಾಗಿ ಚಲಿಸಿದ್ದರಿಂದ ದ್ವಿಚಕ್ರ ವಾಹನಗಳಿಗೆ ಡಿಕ್ಕಿಯಾಗಿದ್ದು, ವಾಹನಗಳು ಜಖಂಗೊಂಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಗ್ಯಾರೇಜಿನಿಂದ ಹಿಮ್ಮುಖವಾಗಿ ಚಲಿಸಿದ ಕಾರು : ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ,ವಾಹನಗಳು ಜಖಂ
ಇನ್ನು ಮಾಹಿತಿ ತಿಳಿದ ಕೂಡಲೇ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ದಟ್ಟಣೆ ನಿಯಂತ್ರಿಸಿದ್ದಾರೆ. ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ :ಪೌತಿ ಖಾತೆ ಮಾಡಿಕೊಡಲು 2,000 ಲಂಚ ಕೇಳಿದ ಗ್ರಾಮ ಲೆಕ್ಕಾಧಿಕಾರಿ - ವಿಡಿಯೋ ವೈರಲ್
TAGGED:
four vehicles damaged