ಕರ್ನಾಟಕ

karnataka

ETV Bharat / state

ಅಂಗನವಾಡಿ ಶಾಲೆಗೆ ಪಡಿತರ ನೀಡಲು ಬಂದ ಕ್ಯಾಂಟರ್​ಗೆ ವಿದ್ಯುತ್ ಸ್ಪರ್ಶ : ಚಾಲಕ ಸಾವು - ಚಿಕ್ಕಬಳ್ಳಾಪುರದಲ್ಲಿ ಚಾಲಕ ಸಾವು

ಉಡುಮಲೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂಗನವಾಡಿ ಮಕ್ಕಳಿಗೆ ಪಡಿತರ ವಿತರಣೆಯ ಸಲುವಾಗಿ ಶಾಲೆಯ ಕಾಂಪೌಂಡ್‌ನಲ್ಲಿ ವಾಹನವನ್ನು ಹಿಂದೆ ಚಲಾಯಿಸಿಕೊಂಡು ಬರುವ ವೇಳೆ ವಾಹನವು ವಿದ್ಯುತ್ ತಂತಿಗೆ ತಗುಲಿದೆ. ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ..

ಕ್ಯಾಂಟರ್​ಗೆ ವಿದ್ಯುತ್ ಸ್ಪರ್ಶ ಚಾಲಕ ಸಾವು
ಕ್ಯಾಂಟರ್​ಗೆ ವಿದ್ಯುತ್ ಸ್ಪರ್ಶ ಚಾಲಕ ಸಾವು

By

Published : Nov 12, 2021, 6:52 PM IST

ಚಿಕ್ಕಬಳ್ಳಾಪುರ :ಅಂಗನವಾಡಿ ಶಾಲೆಗೆ ಪಡಿತರ ವಿತರಿಸಲು ಬಂದ ಕ್ಯಾಂಟರ್‌ಗೆ ವಿದ್ಯುತ್ ಸ್ಪರ್ಶಿಸಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಉಡುಮಲೋಡು ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದಿದೆ. ಶಿಡ್ಲಘಟ್ಟ ಮೂಲದ ಶರತ್ (28) ಎಂಬಾತ ಮೃತ ಚಾಲಕ.

ಉಡುಮಲೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂಗನವಾಡಿ ಮಕ್ಕಳಿಗೆ ಪಡಿತರ ವಿತರಣೆಯ ಸಲುವಾಗಿ ಶಾಲೆಯ ಕಾಂಪೌಂಡ್‌ನಲ್ಲಿ ವಾಹನವನ್ನು ಹಿಂದೆ ಚಲಾಯಿಸಿಕೊಂಡು ಬರುವ ವೇಳೆ ವಾಹನವು ವಿದ್ಯುತ್ ತಂತಿ ತಗುಲಿದೆ. ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆಯ ವೇಳೆ ಮಕ್ಕಳು ಯಾರೂ ಶಾಲೆಯಲ್ಲಿ ಇಲ್ಲದಿರುವುದು ದೊಡ್ಡ ಅಪಘಾತವನ್ನು ತಪ್ಪಿಸಿದಂತಾಗಿದೆ. ಘಟನಾ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details