ಚಿಕ್ಕಬಳ್ಳಾಪುರ:ಆರ್‌ಟಿಒ ಕಚೇರಿ ಮುಂದೆಯೇ ರಸ್ತೆ ಅಪಘಾತ ನಡೆದಿದ್ದು, ಸವಾರರಿಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ನಗರದ ಹೊರವಲಯದ ಕನ್ನಂಪಲ್ಲಿ-ಬೆಂಗಳೂರು ರಸ್ತೆಯಲ್ಲಿನ ಸಹಾಯ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ನಡೆದಿದೆ.
ಆರ್‌ಟಿಒ ಕಚೇರಿ ಎದುರೇ ಅಪಘಾತ: ಇಬ್ಬರು ಪ್ರಾಣಾಪಾಯದಿಂದ ಪಾರು - The two were rescued
ನಿತ್ಯ ಎಆರ್ಟಿಒ ಕಚೇರಿಗೆ ವಾಹನಗಳ ಪರವಾನಗಿ ಮಾಡಿಸಲು ನೂರಾರು ಸಾರ್ವಜನಿಕರು ಓಡಾಡುತ್ತಾರೆ. ಕಚೇರಿ ಎದುರೇ ಯೂ ಟರ್ನ್ ಇರುವುದರಿಂದ ನೇರವಾಗಿ ಬರುವ ವಾಹನ ಸವಾರರಿಗೆ ಕಚೇರಿಯಿಂದ ಹೊರ ಬರುವ ವಾಹನಗಳು ಹಾಗೂ ಯೂ ಟರ್ನ್ ತೆಗೆದುಕೊಳ್ಳುವ ಸವಾರರ ಅರಿವಿಲ್ಲದೆ ಅಪಘಾತಗಳು ಸಂಭವಿಸುತ್ತಿವೆ.
![ಆರ್‌ಟಿಒ ಕಚೇರಿ ಎದುರೇ ಅಪಘಾತ: ಇಬ್ಬರು ಪ್ರಾಣಾಪಾಯದಿಂದ ಪಾರು ಆರ್‌ಟಿಒ ಕಚೇರಿ](https://etvbharatimages.akamaized.net/etvbharat/prod-images/768-512-10095028-thumbnail-3x2-dgjfh.jpg)
ಆರ್‌ಟಿಒ ಕಚೇರಿ
ನಿತ್ಯ ಎಆರ್ಟಿಒ ಕಚೇರಿಗೆ ವಾಹನಗಳ ಪರವಾನಗಿ ಮಾಡಿಸಲು ನೂರಾರು ಸಾರ್ವಜನಿಕರು ಓಡಾಡುತ್ತಾರೆ. ಕಚೇರಿ ಎದುರೇ ಯೂ ಟರ್ನ್ ಇರುವುದರಿಂದ ನೇರವಾಗಿ ಬರುವ ವಾಹನ ಸವಾರರಿಗೆ ಕಚೇರಿಯಿಂದ ಹೊರ ಬರುವ ವಾಹನಗಳು ಹಾಗೂ ಯೂ ಟರ್ನ್ ತೆಗೆದುಕೊಳ್ಳುವ ಸವಾರರ ಅರಿವಿಲ್ಲದೆ ಅಪಘಾತಗಳು ಸಂಭವಿಸುತ್ತಿವೆ.
ಆರ್‌ಟಿಒ ಕಚೇರಿ ಎದುರೇ ಅಪಘಾತ
ಒಂದು ವರ್ಷಕ್ಕೆ ಸುಮಾರು 10ರಿಂದ 15 ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಅಪಘಾತಗಳಿಗೆ ಅವಕಾಶ ನೀಡದೆ ಇಲ್ಲಿ ಉಬ್ಬು ಅಥವಾ ಬ್ಯಾರಿಕೇಡ್ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.