ಚಿಂತಾಮಣಿ: ಕೊರೊನಾ ವೈರಸ್ ಕುರಿತು ಮುಂಜಾಗ್ರತಾ ಕ್ರಮ ವಹಿಸಲು ಇಲ್ಲಿನ ತಾಲೂಕು ಆಡಳಿತ, ನಗರಸಭೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ.
ಕದ್ದುಮುಚ್ಚಿ ವ್ಯಾಪಾರ ಮಾಡುತ್ತಿದ್ದ ದಿನಸಿ ಅಂಗಡಿಗಳನ್ನು ಮುಚ್ಚಿಸಿದ ತಾಲೂಕಾಡಳಿತ - ಚಿಕ್ಕಬಳ್ಳಾಪುರದ ಚಿಂತಾಮಣಿ ನಗರ
ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿ ಕದ್ದುಮುಚ್ಚಿ ತೆರೆದಿದ್ದ ದಿನಸಿ ಅಂಗಡಿಗಳನ್ನು ತಾಲೂಕು ಆಡಳಿತದ ಅಧಿಕಾರಿಗಳು ಮುಚ್ಚಿಸಿದ್ದಾರೆ.
ದಿನಸಿ ಅಂಗಡಿಗಳನ್ನು ಮುಚ್ಚಿಸಿದ ತಾಲೂಕಾಡಳಿತ
ನಗರದ ಹಲವಾರು ಬೀದಿಗಳಲ್ಲಿ ದಿನಸಿ ಅಂಗಡಿಗಳನ್ನು ತೆಗೆದು ಕದ್ದುಮುಚ್ಚಿ ವ್ಯಾಪಾರ ಮಾಡಲಾಗುತಿತ್ತು. ತಾಲೂಕು ದಂಡಾಧಿಕಾರಿ ಎಸ್.ಎಲ್.ವಿಶ್ವನಾಥ್ ನೇತೃತ್ವದಲ್ಲಿಸ್ವಯಂ ಪ್ರೇರಿತವಾಗಿ ಇಂತಹ ಅಂಗಡಿಗಳನ್ನು ಮುಚ್ಚಿಸಲಾಗಿದೆ.
ಮೆಡಿಕಲ್ ಸ್ಟೋರ್ ಬಳಿ ನಿಂತಿರುವ ಜನರಿಗೆ ಕೊರೊನಾ ವೈರಸ್ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಎಸ್.ಎಲ್.ವಿಶ್ವನಾಥ್ ಮಾತನಾಡಿ, ಸ್ವಯಂ ಪ್ರೇರಿತ ಬಂದ್ಗೆ ಚಿಂತಾಮಣಿ ಜನರು ಸಹಕರಿಸಿ ಯಶಸ್ವಿಗೊಳಿಸುತ್ತಿರುವುದಕ್ಕೆ ಧನ್ಯವಾದ ಎಂದರು.