ಚಿಕ್ಕಬಳ್ಳಾಪುರ: ಉಕ್ರೇನ್ನಿಂದ ತಾಯ್ನಾಡಿಗೆ ಆಗಮಿಸಿದ ಚಿಕ್ಕಬಳ್ಳಾಪುರ ಮೂಲದ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಯುದ್ಧ ಭೀತಿಯ ಘಟನೆಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಉಕ್ರೇನ್ನ ಅನುಭವವನ್ನು ಬಿಚ್ಚಿಟ್ಟ ವಿದ್ಯಾರ್ಥಿಗಳು ನಾಲ್ಕು ದಿನ ಪ್ರಯಾಣ ಮಾಡಿ ಏರ್ಲಿಫ್ಟ್ ಮೂಲಕ ಮೂಲದ ವಿದ್ಯಾರ್ಥಿಗಳಾದ ಗೌತಮ್, ರಂಗನಾಥ್, ನವನೀತ್ ಆಗಮಿಸಿದ್ದು, ಅವರ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, 10 ದಿನಗಳಿಂದ ಬಂಕರ್ಸ್ನಲ್ಲಿ ವಾಸ್ತವ್ಯ ಹೂಡಿದ್ದ ವಿದ್ಯಾರ್ಥಿಗಳ ಕಷ್ಟಗಳನ್ನು ಕೇಳಿ ಅವರು ಸಹ ಕಣ್ಣೀರು ಹಾಕಿದ್ದಾರೆ.
ಮಾಲ್ದೋ ಕೋಲ್ಡ್ ಕ್ಲೈಮೇಟ್ನಲ್ಲಿ ನರಕ ಅನುಭವಿಸಿದ್ದ ವಿದ್ಯಾರ್ಥಿಗಳು ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಕ್ಷೇಮವಾಗಿ ಕರೆತಂದ ಭಾರತ ಸರ್ಕಾರಕ್ಕೆ ಪೋಷಕರು ಹಾಗೂ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ.
ಮಾಲ್ಡೀವ್ಸ್ನಿಂದ ದೆಹಲಿಗೆ ಬಂದು ನಂತರ ಕರ್ನಾಟಕಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಉಕ್ರೇನ್ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯ ಉಕ್ರೇನ್‌ನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಯುದ್ಧ ವಿರಾಮದ ನಂತರ ಮಂದೆ ನಡೆಯಬಹುದಾದ ಮಾರಣಹೋಮಕ್ಕೆ ಸಿದ್ಧತೆಯ ಸೂಚನೆ ಮಾಡಿದಂತಿದೆ ಎಂದು ತಿಳಿಸಿದ್ದಾರೆ.
ಓದಿ:ಮುರಗೋಡ ಡಿಸಿಸಿ ಬ್ಯಾಂಕ್ ಶಾಖೆಗೆ ಕನ್ನ: 4.41 ಕೋಟಿ ನಗದು, 1.5 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ