ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಮೊಬೈಲ್ ಚಟ ಬಿಡು, ಚೆನ್ನಾಗಿ ಓದು ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ - mobile addiction

ಹೆಚ್ಚು ಮೊಬೈಲ್ ಬಳಸುವುದನ್ನು ಬಿಟ್ಟು ಚೆನ್ನಾಗಿ ಓದು ಎಂದಿದ್ದಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

suicide
ಆತ್ಮಹತ್ಯೆ

By ETV Bharat Karnataka Team

Published : Nov 6, 2023, 8:17 AM IST

Updated : Nov 6, 2023, 10:23 AM IST

ಚಿಕ್ಕಬಳ್ಳಾಪುರ:ಮೊಬೈಲ್ ಚಟ ಬಿಟ್ಟು ಚೆನ್ನಾಗಿ ಓದು ಎಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಟ್ಟಾವಲಹಳ್ಳಿ ಗ್ರಾಮದಲ್ಲಿ ನಡೆದಿದೆ.

15 ವರ್ಷದ ಲೋಕೇಶ್ ಸಾವಿಗೆ ಶರಣಾದ ವಿದ್ಯಾರ್ಥಿ. ಚಿಟ್ಟಾವಲಹಳ್ಳಿ ಗ್ರಾಮದ ಚಾಲಕ ರಾಮಾಂಜಿನಪ್ಪ ಅವರ ಪುತ್ರ ಲೋಕೇಶ್, ಗೌರಿಬಿದನೂರು ನಗರದ ಎಸ್​ಇಎಸ್ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ. ಶಾಲೆ ಬಿಟ್ಟ ನಂತರ ಹೆಚ್ಚಾಗಿ ಮೊಬೈಲ್ ನೋಡುತ್ತಿದ್ದ ಈತ ಗೇಮ್‌ಗಳಲ್ಲಿ ಬ್ಯುಸಿಯಾಗಿರುತ್ತಿದ್ದ. ಇದರಿಂದ ಕೋಪಗೊಂಡ ಪೋಷಕರು ಮಗನಿಗೆ ಸಾಕಷ್ಟು ಬಾರಿ ಬುದ್ಧಿವಾದ ಹೇಳಿದ್ದಾರೆ.

ನಿನ್ನೆ (ಭಾನುವಾರ) ಸಹ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿರುವುದನ್ನು ಕಂಡ ಪೋಷಕರು ಮೊಬೈಲ್ ಬಿಟ್ಟು ಚೆನ್ನಾಗಿ‌ ಓದು, ಮುಂದೆ ಎಸ್ಎಸ್ಎಲ್​ಸಿ ಓದುವೆ. ಹೆಚ್ಚಿನ ಅಂಕ ಪಡೆದು ಒಳ್ಳೆಯ ಉದ್ಯೋಗಕ್ಕೆ ಹೋಗು ಎಂದಿದ್ದಾರೆ. ಇದರಿಂದ ಬೇಸರಗೊಂಡ ಲೋಕೇಶ್ ಮನೆಯಿಂದ ಹೊಲದ ಕಡೆ ಹೋಗಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗೌರಿಬಿದನೂರು ಶವಾಗಾರಕ್ಕೆ ರವಾನಿಸಿದ್ದಾರೆ.

ಇದನ್ನೂ ಓದಿ:'ನನಗೆ ಸ್ನೇಹಿತರಿಲ್ಲ, ಮೊಬೈಲ್​ ಗೀಳು ಹೆಚ್ಚಾಗಿತ್ತು': 16 ವರ್ಷದ ಬಾಲಕಿ ಆತ್ಮಹತ್ಯೆ

ಇತ್ತೀಚಿನ ವರ್ಷಗಳಲ್ಲಿ ಬಾಲ್ಯದಲ್ಲಿ ದೀರ್ಘಕಾಲ ಮೊಬೈಲ್​ ಅಥವಾ ಲಾಪ್​ಟಾಪ್​ ಸೇರಿದಂತೆ ಸ್ಕ್ರೀನ್‌ಗಳಲ್ಲಿ ಮಕ್ಕಳು ಕಳೆಯುತ್ತಿರುವ ಸಮಯದ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಈ ಅಧ್ಯಯನಗಳಲ್ಲಿ ಅಧಿಕ ಕಾಲ ಸ್ಕ್ರೀನ್​ ಟೈಂ ವೀಕ್ಷಣೆ (ಮೊಬೈಲ್​) ಮಾಡಿದ ಮಗುವಿನ ನರದ ಅಭಿವೃದ್ಧಿ ಮತ್ತು ಸಾಮಾಜೀಕರಣದ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.

ಮಕ್ಕಳು ಅಧಿಕ ಕಾಲ ಸ್ಕ್ರೀನ್​ನಲ್ಲಿ ಕಳೆಯುವುದರಿಂದ ತಮ್ಮ ಸುತ್ತಮುತ್ತಲಿನ ಪರಿಸರದೊಂದಿಗೆ ಸಂಬಂಧವನ್ನು ಕಡಿದುಕೊಳ್ಳುತ್ತಾರೆ. ಈ ಚಟವೂ ಅನೇಕ ಬಾರಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಮೊಬೈಲ್​ ಬಳಕೆಯು ನರ ಅರಿವಿನ (ನ್ಯೂರೋಕಾಂಗ್ನಿಟಿವ್​) ಕಲಿಕೆ ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ. ಇದಕ್ಕಿಂತ ಹೆಚ್ಚಾಗಿ ಮಕ್ಕಳು ಮತ್ತು ಪ್ರೌಢರು ಅಧಿಕ ಕಾಲ ಟಿವಿ, ವಿಡಿಯೋ ಗೇಮ್​, ಮೊಬೈಲ್​ ಫೋನ್​ ಮತ್ತು ಟ್ಯಾಬ್ಲೆಟ್​​ಗಳನ್ನು ಬಳಸುವುದರಿಂದ ಅವರಲ್ಲಿ ಜಢ ಜೀವನಶೈಲಿ ಉಂಟಾಗುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ:ಹೃದಯಕ್ಕೆ ಹಾನಿ; ಮಕ್ಕಳ ಮೊಬೈಲ್, ಟಿವಿ​​​​​ ವೀಕ್ಷಣೆಗೆ ಬೇಕಿದೆ ಕಡಿವಾಣ.. ಇಲ್ಲದಿದ್ದರೆ ಆಗುವ ಅವಾಂತರ ಹೇಳೋಕಾಗಲ್ಲ!

ಹಾಗೆಯೇ, ಕುಯೋಪಿಯೊದಲ್ಲಿನ ಈಸ್ಟರ್ನ್ ಫಿನ್‌ಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ ಆಂಡ್ರ್ಯೂ ಅಗ್ಬಾಜೆ ನೇತೃತ್ವದಲ್ಲಿ ನಡೆದ ಸಂಶೋಧನೆಯಲ್ಲಿ "ಬಾಲ್ಯದಲ್ಲಿ ಮಕ್ಕಳಲ್ಲಿ ಅಭಿವೃದ್ಧಿಯಾಗುವ ಜಢ ಜೀವನಶೈಲಿಯು ಹೃದಯದ ಹಾನಿ ಅಪಾಯವನ್ನು ಹೆಚ್ಚಿಸುತ್ತದೆ" ಎಂದಿದ್ದಾರೆ.

ಇದನ್ನೂ ಓದಿ:ದುಷ್ಕರ್ಮಿಗಳಿಂದ ಮೊಬೈಲ್ ರಕ್ಷಿಸಿಕೊಳ್ಳಲು ಯತ್ನಿಸಿದ ಬಿ.ಟೆಕ್‌ ವಿದ್ಯಾರ್ಥಿನಿ ಆಟೋದಿಂದ ಬಿದ್ದು ಸಾವು; ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಆರೋಪಿ ಹತ್ಯೆ

Last Updated : Nov 6, 2023, 10:23 AM IST

ABOUT THE AUTHOR

...view details