ಚಿಂತಾಮಣಿ (ಚಿಕ್ಕಬಳ್ಳಾಪುರ): ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಳೆದ 12 ದಿನಗಳಿಂದ ಆಸ್ಪತ್ರೆಯ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ. ಆದರೆ ಇತ್ತ ಆಸ್ಪತ್ರೆ ಬೀದಿ ನಾಯಿಗಳ ವಾಸ ಸ್ಥಾನವಾದ ಘಟನೆ ಜಿಲ್ಲೆಯ ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಮುಷ್ಕರದಲ್ಲಿ ತೊಡಗಿರುವ ಸಿಬ್ಬಂದಿ: ಬೀದಿ ನಾಯಿಗಳ ವಾಸ ಸ್ಥಾನವಾದ ಸರ್ಕಾರಿ ಆಸ್ಪತ್ರೆ - Street dogs in Chintamani government hospital news
ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲದೆ ರೋಗಿಗಳ ಬದಲು ನಾಯಿಗಳು ಬೆಡ್ ಮೇಲೆ ಮಲಗುವ ದುಸ್ಥಿತಿ ಎದುರಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ 35ಕ್ಕೂ ಹೆಚ್ಚಿನ ನೌಕರರು ಮುಷ್ಕರದಲ್ಲಿ ತೊಡಗಿರುವುದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
![ಮುಷ್ಕರದಲ್ಲಿ ತೊಡಗಿರುವ ಸಿಬ್ಬಂದಿ: ಬೀದಿ ನಾಯಿಗಳ ವಾಸ ಸ್ಥಾನವಾದ ಸರ್ಕಾರಿ ಆಸ್ಪತ್ರೆ ಬೀದಿ ನಾಯಿಗಳ ಆವಾಸವಾದ ಸರ್ಕಾರಿ ಆಸ್ಪತ್ರೆ](https://etvbharatimages.akamaized.net/etvbharat/prod-images/768-512-9066380-thumbnail-3x2-dog.jpg)
ಸಾರ್ವಜನಿಕ ಆಸ್ಪತ್ರೆಯ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ಕಳೆದ 12 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ತೊಡಗಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲದೆ ರೋಗಿಗಳ ಬದಲು ನಾಯಿಗಳು ಬೆಡ್ ಮೇಲೆ ಮಲಗುವ ದುಸ್ಥಿತಿ ಎದುರಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ 35ಕ್ಕೂ ಹೆಚ್ಚಿನ ನೌಕರರು ಮುಷ್ಕರದಲ್ಲಿ ತೊಡಗಿರುವುದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಅಷ್ಟೇ ಅಲ್ಲದೆ ಸ್ವಚ್ಛತೆ ಮಾಡುವವರಿಲ್ಲದೆ ಆಸ್ಪತ್ರೆ ಗಬ್ಬುನಾತ ಬೀರುವಂತಾಗಿದ್ದು, ಮತ್ತಷ್ಟು ರೋಗಗಳು ಹರಡುವ ಭೀತಿ ಆಸ್ಪತ್ರೆಗೆ ಭೇಟಿ ನೀಡುವವರು ಹಾಗೂ ರೋಗಿಗಳಲ್ಲಿ ಎದುರಾಗಿದೆ.