ಚಿಕ್ಕಬಳ್ಳಾಪುರ :ಬುಧವಾರಮುರುಗಮಲ್ಲ ಬಳಿ ಖಾಸಗಿ ಬಸ್ಸು ಡಿಕ್ಕಿ ಹೊಡೆದು 11 ಜನ ಸಾವನ್ನಪ್ಪಿದ್ದರು. ಇದಕ್ಕೆ ಚಾಲಕನ ವೇಗವೇ ಕಾರಣ ಎಂದು ತಿಳಿದು ಬಂದಿದ್ದು, ಈ ಕಾರಣದಿಂದ ವಾಹನಗಳ ವೇಗದ ಮಿತಿಯನ್ನು ಕಡಿಮೆಗೊಳಿಸುಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತರು ಪ್ರತಿಭಟನೆ ನಡೆಸಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸಿದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಚಿಂತಾಮಣಿ ತಾಲೂಕು ಕಛೇರಿ ಮುಂದೆ ರೈತರು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಖಾಸಗಿ ಬಸ್ಸುಗಳ ವೇಗವನ್ನು ಮಿತಿಗೊಳಿಸಬೇಕು, ಕುಡಿಯುವ ನೀರಿನ ಸಮಸ್ಯೆ, ಆಧಾರ್ ತಿದ್ದುಪಡಿ ಹೀಗೆ ಹಲವು ಬೇಡಿಕೆಗಳು ಈಡೇರಿಸುವಂತೆ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಸಂಚಾಲಕ ಹುಸೇನ್ ಸಾಬಿ, ತಾಲೂಕಿನಲ್ಲಿ ಖಾಸಗಿ ಬಸ್ಸುಗಳು ಮಿತಿ ಇಲ್ಲದಂತೆ ವೇಗವಾಗಿ ಚಲಾಯಿಸುತ್ತಿದ್ದು, ಅಪಘಾತ ನಡೆಯುತ್ತಿವೆ. ಕಳೆದ ದಿನ ಮುರುಗಮಲ್ಲ ಬಳಿ ಖಾಸಗಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ 11 ಜನ ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮ್ಯಾಕ್ಸಿಕ್ಯಾಬ್ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಬೇಕು. ಅಪಘಾತದಲ್ಲಿ ಸಾವನ್ನಪ್ಪಿರುವ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಪರಿಹಾರ ಹಣವನ್ನು ಕೊಡಬೇಕೆಂದು ತಾಲ್ಲೂಕು ದಂಡಾಧಿಕಾರಿಗಳಾದ ಎಸ್ .ಎಲ್. ವಿಶ್ವನಾಥ್ಗೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷರಾದ ಆರ್ .ಎಮ್. ರಮೇಶ್ ಬಾಬು, ಉಪಾಧ್ಯಕ್ಷರಾದ ಸಿ .ಶ್ರೀನಿವಾಸ್ ರೆಡ್ಡಿ. ಕಾರ್ಯದರ್ಶಿ ರೆಡ್ಡಪ್ಪ ,ಬಾಬಾ ಜಾನ್ ,ಮುಜ್ಮಿಲ್,ದಾದಾಪೀರ್,ಶ್ರೀರಾಮ್ ರೆಡ್ಡಿ ಸೇರಿದಂತೆ ಹಲವಾರು ಪದಾಧಿಕಾರಿಗಳು ಭಾಗವಹಿಸಿದ್ದರು.