ಕರ್ನಾಟಕ

karnataka

ETV Bharat / state

ಸಾಲಗಾರ ತಂದೆ ಕೊಲೆ ಮಾಡಿದ ಪಾಪಿ ಮಗ: ಹತ್ಯೆಗೆ ಮೂರು ಬಾರಿ ಸ್ಕೆಚ್​.. ಅಂತಿಮವಾಗಿ ಸಕ್ಸಸ್​! - ಚಿಕ್ಕಬಳ್ಳಾಪುರ ತಂದೆಯನ್ನು ಕೊಲೆ ಮಾಡಿದ ಮಗ ಸುದ್ದಿ

ತಂದೆ ಸಾಲಗಾರನಾಗಿದ್ದ ಎಂದು ಬೇಸತ್ತ ಮಗ ಆತನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಮೂರು ಬಾರಿ ಕೊಲೆಗೆ ಸ್ಕೆಚ್​ ಹಾಕಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ.

By

Published : Jun 24, 2021, 8:19 PM IST

ಚಿಕ್ಕಬಳ್ಳಾಪುರ:ತಂದೆಯನ್ನು ಕೊಲೆ ಮಾಡಿಸಿ ತನಗೇನು ಸಂಬಂಧವಿಲ್ಲ ಎಂಬಂತೆ ಕೊಲೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ ಮಗ ಇದೀಗ ಜೈಲು ಸೇರಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಜೋಡಿಬಿಸಲಹಳ್ಳಿ ವ್ಯಾಪ್ತಿಯಲ್ಲಿ ನಡೆದಿದೆ‌.

ಜೂ. 14 ರಂದು ತಾಲೂಕಿನ ಜೋಡಿಬಿಸಲಹಳ್ಳಿ ಗ್ರಾಮದ ರೈತ ಶ್ರೀನಿವಾಸಮೂರ್ತಿ(59) ರಾತ್ರಿ ಹೊಲಕ್ಕೆ ನೀರು ಹಾಯಿಸಲು ಹೋದಾಗ ತಲೆಯ ಹಿಂಬದಿ ಭಾಗಕ್ಕೆ ಕಬ್ಬಿಣದ ರಾಡ್​ನಿಂದ ಹೊಡೆದು ಕೊಲೆ ಮಾಡಿರುವುದಾಗಿ ಗ್ರಾಮಾಂತರ ಪೋಲೀಸರು ದೂರು ದಾಖಲಿಸಿಕೊಂಡಿದ್ದರು.

ಈ ದೂರನ್ನು ಭೇದಿಸಲು ಹೋದ ಪೋಲೀಸರಿಗೆ ಮಧುಗಿರಿ ತಾಲೂಕಿನ ಶ್ರಾವಣಹಳ್ಳಿಯ ರವಿಕುಮಾರ್ ಅಲಿಯಾಸ್ ರವಿ ಹಾಗೂ ಜೋಡಿಬಿಸಲಹಳ್ಳಿಯ ರಂಗನಾಥ್ ಅಲಿಯಾಸ್ ರಂಗ ಅಲಿಯಾಸ್ ದಾಸ್​ನನ್ನು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದ್ದರು.

ಈ ವೇಳೆ, ಶ್ರೀನಿವಾಸ್​ರ ಹಿರಿಯ ಮಗ ರೋಹಿತ್ ಕೊಲೆಗೆ ಒಂದು ಲಕ್ಷ ರೂಗಳಿಗೆ ಸುಪಾತಿ ನೀಡಿ, 30 ಸಾವಿರ ರೂಗಳನ್ನು ಮುಂಗಡವಾಗಿ ಕೊಟ್ಟಿರುವುದಾಗಿ ವಿಚಾರಣೆಯಲ್ಲಿ ತಿಳಿದು ಬಂದಿದೆ.

ಕೊಲೆಗೆ ಕಾರಣ:ತಂದೆ ಶ್ರೀನಿವಾಸ ಮೂರ್ತಿ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದು ಸಾಲಗಾರನಾಗಿದ್ದ. ಇದರಿಂದ ಬೇಸತ್ತು ಕೊಲೆಗಾರರಿಗೆ ಸುಪಾರಿ ನೀಡಿ ಕೊಲೆ ಮಾಡಿಸಿರುವುದಾಗಿ ತಿಳಿದು ಬಂದಿದೆ. ಈ ಹಿಂದೆಯೇ ರೋಹಿತ್ ತಂದೆಗೆ ವಿಷ ಉಣಿಸಿ, ಪ್ಯಾನಲ್ ಬೋರ್ಡಿಗೆ ವಿದ್ಯುತ್ ಹಾಯಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ್ದಾನೆ.

ಕೊನೆಯದಾಗಿ ತಂದೆ ರಾತ್ರಿ ವೇಳೆ ಹೊಲಕ್ಕೆ ನೀರು ಹಾಯಿಸಲು ಹೋದಾಗ ಸುಫಾರಿ ಕೊಟ್ಟು ಕೊಲೆ ಮಾಡಿಸಲು ಮುಂದಾಗಿದ್ದಾನೆ. ಕೊಲೆಗಾರರು ಕೊಲೆಗೆ ಉಪಯೋಗಿಸಿದ ಕಬ್ಬಿಣದ ರಾಡ್, ಕಟಿಂಗ್ ಪ್ಲಯರ್, ಟೆಸ್ಟರ್, ದ್ವಿಚಕ್ರ ವಾಹನವನ್ನು ಸ್ವಾದೀನ ಪಡಿಸಿಕೊಂಡಿದ್ದಾರೆ. ಕೊಲೆ ಪ್ರಕರಣವನ್ನು ಅಲ್ಪ ಕಾಲದಲ್ಲೇ ಭೇದಿಸಿದ ಪೊಲೀಸ್ ಸಿಬ್ಬಂದಿಗೆ ವರಿಷ್ಠಾಧಿಕಾರಿ ಜಿ.ಕೆ ಮಿಥುನ್​ ಕುಮಾರ್,​ ಬಹುಮಾನ ಘೋಷಿಸಿದ್ದಾರೆ.

ABOUT THE AUTHOR

...view details