ಕರ್ನಾಟಕ

karnataka

ETV Bharat / state

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಗೆ ಸ್ಕೆಚ್​.. ಮಹಿಳೆ ಸೇರಿ ಆರು ಜನರು ಅಂದರ್ - Shidlaghatta polide

ಗುಂಡು ಹಾರಿಸಿ ಪತಿಯ ಹತ್ಯೆಗೆ ವಿಫಲ ಯತ್ನ ಮಾಡಿದ್ದ ಮಹಿಳೆ ಸೇರಿ ಆರು ಜನರನ್ನು ಶಿಡ್ಲಘಟ್ಟ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಸಂಬಂಧ
ಅಕ್ರಮ ಸಂಬಂಧ

By

Published : Aug 26, 2021, 6:49 PM IST

ಚಿಕ್ಕಬಳ್ಳಾಪುರ: ಪತಿಗೆ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಮಹಿಳೆ(ಪತ್ನಿ) ಹಾಗೂ ಪ್ರಿಯಕರ, ಸಹೋದರ ಸೇರಿ ಆರು ಮಂದಿಯನ್ನು ಶಿಡ್ಲಘಟ್ಟ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದರು. ಸುಮಿತ್ರ ಎಂಬಾಕೆ ಆನೆಮಡುಗು ಗ್ರಾಮದ ಗೋವಿಂದಪ್ಪನ ಹತ್ಯೆಗೆ ಸುಪಾರಿ ಕೊಟ್ಟಿದ್ದಾಳೆ ಎಂಬ ಆರೋಪ ಕೇಳಿ ಬಂದಿತ್ತು.

ಘಟನೆಯ ವಿವರ
ಆಗಸ್ಟ್ 18 ರಂದು ನಗರದ ಇದ್ಲೂಡು ರಸ್ತೆಯಲ್ಲಿ ಗೋವಿಂದಪ್ಪ ನಡೆದು ಬರುತ್ತಿದ್ದ. ಈ ವೇಳೆ, ಹಿಂಬದಿಯಿಂದ ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಮಸಲ್ ಗನ್‌ನಲ್ಲಿ ‌ಸೈಕಲ್ ಬಾಲ್ಸ್ ಗಳನ್ನು ಬಳಸಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದರು. ದಾಳಿಯಲ್ಲಿ ಗೋವಿಂದಪ್ಪನ ಬೆನ್ನು ಮತ್ತು ತಲೆಗೆ ಗಾಯವಾಗಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು, ಪತ್ನಿ ಸುಮಿತ್ರಾ ವಿಚಾರಣೆ ನಡೆಸಿದ ವೇಳೆ ಆಕೆಯೇ ಪತಿ ಹತ್ಯೆಗೆ ಯತ್ನಿಸಿರುವುದಾಗಿ ತಿಳಿದು ಬಂದಿದೆ. ಸುಮಿತ್ರ ಹಾಗೂ ಮುನಿಕೃಷ್ಣ ನಡುವೆ ಅಕ್ರಮ ಸಂಬಂಧವಿದ್ದು, ಈ ವಿಚಾರ ಗೋವಿಂದಪ್ಪನಿಗೆ ತಿಳಿದಿತ್ತಂತೆ. ಅಲ್ಲದೇ, ಪತ್ನಿಗೆ ಗೋವಿಂದಪ್ಪ ಸಾಕಷ್ಟು ಬಾರಿ ಬುದ್ಧಿಯೂ ಹೇಳಿದ್ದಾನೆ ಎನ್ನಲಾಗಿದೆ.

ಇದೇ ವಿಚಾರವಾಗಿ ಸುಮಿತ್ರಾ ತನ್ನ ಪ್ರಿಯಕರ ಹಾಗೂ ಸಹೋದರನ ಜತೆ ಸೇರಿ ಪತಿಯ ಹತ್ಯೆಗೆ ಸ್ಕೆಚ್ ಹಾಕಿದ್ದಾಳೆ. ಹರೀಶ್, ಮುರಳಿ, ಪ್ರವೀಣ್ ಎಂಬುವರಿಗೆ 2 ಲಕ್ಷ ರೂ. ಕೊಟ್ಟಿದ್ದಳಂತೆ ಸುಮಿತ್ರಾ.

ಇದನ್ನೂ ಓದಿ: ತೆಲುಗು ರಾಜ್ಯಗಳಿಂದ ಚೀನಾಗೆ 16 ಕೋಟಿ ರೂ. ಮೌಲ್ಯದ ಕೂದಲು ಕಳ್ಳಸಾಗಣೆ

ಸದ್ಯ ಸುಮಿತ್ರಾ, ಪ್ರಿಯಕರ ಮುನಿಕೃಷ್ಣಾ ಹಾಗೂ ಸಹೋದರನನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ABOUT THE AUTHOR

...view details