ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಲಾರಿ- ಜೀಪ್ ನಡುವೆ ಭೀಕರ ಅಪಘಾತ, 7 ಸಾವು, ಐವರು ಗಂಭೀರ - ಅಪಘಾತದಲ್ಲಿ ಐವರು ಸಾವು

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಾಡಿಕೆರೆ ಕ್ರಾಸ್ ಬಳಿ ಲಾರಿ ಹಾಗೂ ಜೀಪ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ.

five people died in Chikkaballapur accident
ಅಪಘಾತದಲ್ಲಿ ಆರು ಮಂದಿ ದುರ್ಮರಣ

By

Published : Sep 12, 2021, 4:33 PM IST

Updated : Sep 12, 2021, 5:22 PM IST

ಚಿಕ್ಕಬಳ್ಳಾಪುರ: ಲಾರಿ ಹಾಗೂ ಜೀಪ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು 7 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ದುರಂತ ಚಿಂತಾಮಣಿ ತಾಲೂಕಿನ ಮಾಡಿಕೆರೆ ಕ್ರಾಸ್ ಬಳಿ ನಡೆದಿದೆ.

ಲಾರಿ- ಜೀಪ್ ನಡುವೆ ಭೀಕರ ಅಪಘಾತ

ಆಂಧ್ರಪ್ರದೇಶ-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮತ್ತೋರ್ವ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರೆಲ್ಲರೂ ಶ್ರೀನಿವಾಸಪುರ ತಾಲೂಕಿನವರು ಎನ್ನಲಾಗಿದೆ.

ಅಪಘಾತದಲ್ಲಿ ಏಳು ಮಂದಿ ದುರ್ಮರಣ

ಸ್ಥಳಕ್ಕೆ ಎಸ್‌ಪಿ ಸೇರಿದಂತೆ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಅಪಘಾತಕ್ಕೀಡಾದ ಜೀಪ್ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಕಡೆಯಿಂದ ಚಿಂತಾಮಣಿ ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ ತಾಲೂಕಿನ ಮಾಡಿಕೆರೆ ಕ್ರಾಸ್ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆಯಿತು ಎಂದು ತಿಳಿದು ಬಂದಿದೆ‌.

ಜೀಪ್​ ಲಾರಿ ನಡುವೆ ಅಪಘಾತ
Last Updated : Sep 12, 2021, 5:22 PM IST

ABOUT THE AUTHOR

...view details