ಚಿಂತಾಮಣಿ(ಚಿಕ್ಕಬಳ್ಳಾಪುರ): ಕೋವಿಡ್-19 ಹಿನ್ನೆಲೆ ಮುಸ್ಲಿಂರ ಪವಿತ್ರ ಯಾತ್ರಾ ಸ್ಥಳ ಮುರುಗಮಲೆಯಲ್ಲಿ ಹಜರತ್ ಅಮ್ಮಾಜಾನ್ ಮತ್ತು ಬಾವಾಜಾನ್ ದರ್ಗಾದ ಉರುಸ್ ಅಂಗವಾಗಿ ಗಂಧೋತ್ಸವದ ಮೆರವಣಿಗೆಯನ್ನು ಸರಳವಾಗಿ ನಡೆಸಲಾಯಿತು.
ಮುರುಗಮಲೆ ಉರುಸ್ನಲ್ಲಿ ನೆರವೇರಿದ ಸರಳ ಗಂಧೋತ್ಸವ ಮೆರವಣಿಗೆ
ಎರಡು ದಿನ ನಡೆಯುವ ಉರುಸ್ ಕಾರ್ಯಕ್ರಮದಲ್ಲಿ ಮೊದಲ ದಿನ ಗ್ರಾಮದವರ ಪರವಾಗಿ ಗಂಧೋತ್ಸವ ನೆರವೇರಿಸಲಾಯಿತು.
ಮುರುಗಮಲೆ ಉರುಸ್ ನಲ್ಲಿ ನೆರವೇರಿದ ಸರಳ ಗಂಧೋತ್ಸವ ಮೆರವಣಿಗೆ
ಎರಡು ದಿನ ನಡೆಯುವ ಉರುಸ್ ಕಾರ್ಯಕ್ರಮದಲ್ಲಿ ಮೊದಲ ದಿನ ಗ್ರಾಮದವರ ಪರವಾಗಿ ಗಂಧೋತ್ಸವ ನೆರವೇರಿಸಲಾಯಿತು.
ಸಂಪ್ರದಾಯದಂತೆ ದರ್ಗಾದ ಮುಜಾವರ್ ಮನೆಯಿಂದ ದರ್ಗಾ ಗಂಧೋತ್ಸವವನ್ನು ತೆಗೆದುಕೊಂಡು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರಣಿಗೆಯ ಮೂಲಕ ದರ್ಗಾಗೆ ತರಲಾಯಿತು. ನಂತರ ದರ್ಗಾದಲ್ಲಿ ವಿಶೇಷವಾದ ಪುಷ್ಪಗಳಿಂದ ಅಲಂಕರಿಸಲಾಗಿದ್ದ ಅಮ್ಮಾಜಾನ್, ಬಾವಾಜಾನ್ ಸಮಾಧಿಗಳಿಗೆ ಗಂಧ ಸಮರ್ಪಿಸಲಾಯಿತು.
Last Updated : Oct 31, 2020, 9:29 AM IST