ಚಿಕ್ಕಬಳ್ಳಾಪುರ: ಸಾಹಿತಿ ಎಂಎಂ ಕಬ್ಬುರ್ಗಿ ಹತ್ಯೆ ಅದಾಗ ಮೇಣದ ಬತ್ತಿ ಹಚ್ಚಿ ಸುಮ್ಮನಾದೆವು. ಗೌರಿ ಹೋದಾಗ ನಾನು ಗೌರಿ ಅಂತ ಮೇಣದ ಬತ್ತಿ ಹಚ್ಚಿ ಸುಮ್ಮನಾದೆವು. ಆದರೆ, ಆಗ ನಿಡುಮಾಮಿಡಿಗೂ, ಭಗವಾನ್ ಗೂ, ಚಂಪಾಗೂ ಕೊಲೆಯ ಆತಂಕ ಬಂದಿತ್ತು. ಈ ಲಿಸ್ಟ್‌ನಲ್ಲಿ ಸಿದ್ದರಾಮಯ್ಯ ಸಹ ಇದ್ದರು ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿಗಳು ಗಂಭೀರ ಹೇಳಿಕೆ ಕೊಟ್ಟಿದ್ದಾರೆ.
ನಗರದ ಅಂಬೇಡ್ಕರ್ ಸಮಾನತಾ ಸೌಧದಲ್ಲಿ ದಿವಂಗತ ಪ್ರೋಫೆಸರ್ ಬಿ.ಗಂಗಾಧರಮೂರ್ತಿ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ನಿಡುಮಾಮಿಡಿ ಸ್ವಾಮೀಜಿಗಳು, ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶೇ.10ರಷ್ಟು ಸರ್ಕಾರ ಅಂತ ಟೀಕಿಸಿದ್ರು, ಪರವಾಗಿಲ್ಲ ನೀವು ಶೇ.10ನಲ್ಲೇ ಇರಿ. ಬಿಜೆಪಿ ಪಕ್ಷದ ತರ ಶೇ.40 ಆಗಬೇಡಿ. ಈ ಶೇ.40ರಷ್ಟು ಸರ್ಕಾರ ತಪ್ಪಿಸಿ. ಶೇ.10ಕ್ಕೆ ಬನ್ನಿ ನಾವ್ ಓಪ್ಕೋತಿವಿ. ನಾವೆಲ್ಲರೂ ಒಪ್ಪಿಕೊಳ್ಳೋಣ ಎಂದು ಹೇಳಿದರು.
ರಾಜ್ಯದಲ್ಲಿ ಬೆಲೆ ಏರಿಕೆ ತರ ಭ್ರಷ್ಟಾಚಾರ ಏರಿಕೆ ಆಗ್ತಾನೇ ಇದೆ. ಭ್ರಷ್ಟಾಚಾರವನ್ನು ಯಾವ ಪಕ್ಷದಿಂದಲೂ ನಿವಾರಣೆ ಮಾಡಲು ಸಾಧ್ಯವಿಲ್ಲ. ಪ್ರಸ್ತುತ ವ್ಯವಸ್ಥೆಯಲ್ಲಿ ಅಸಹಾಯಕತೆ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭ್ರಷ್ಟಾಚಾರವನ್ನು ಗಣನೀಯವಾಗಿ ತಗ್ಗಿಸುವ ಭರವಸೆ ಕೊಟ್ಟು ಜನರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ರೆ ನಿಮ್ಮನ್ನು ಸ್ವಾಗತಿಸುತ್ತಾರೆ ಎಂದು ಸಲಹೆ ನೀಡಿದ್ದಾರೆ.