ಬಾಗೇಪಲ್ಲಿ:ತಾಲೂಕಿನ ಮಿಟ್ಟೇಮರಿ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಭಕ್ತಿ ಮತ್ತು ಶ್ರದ್ಧೆಗಳಿಂದ ಅದ್ಧೂರಿಯಾಗಿ ನೆರವೇರಿತು.
ಭಕ್ತಿಯಿಂದ ನಡೆದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಬಹ್ಮ ರಥೋತ್ಸವ - Shri Lakshmi Narasimhaswamy Bahma Rathotsav
ಬಾಗೇಪಲ್ಲಿನ ತಾಲೂಕಿನ ಮಿಟ್ಟೇಮರಿ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಿತು.
![ಭಕ್ತಿಯಿಂದ ನಡೆದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಬಹ್ಮ ರಥೋತ್ಸವ Narasimhaswamy Bahma Rathotsav](https://etvbharatimages.akamaized.net/etvbharat/prod-images/768-512-6365052-thumbnail-3x2-vid.jpg)
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬಹ್ಮ ರಥೋತ್ಸವಕ್ಕೆ ನೆರೆಯ ಆಂಧ್ರ ಪ್ರದೇಶದ ಹಾಗೂ ರಾಜ್ಯದ ಅನೇಕ ಭಾಗಗಳಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ರಥೋತ್ಸವದ ತೇರನ್ನು ಎಳೆಯುವ ವೇಳೆ ನರಸಿಂಹ ಸ್ವಾಮಿಯ ನಾಮ ಸ್ಮರಣೆ, ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ರಥದ ಮೇಲೆ ಬಾಳೆಹಣ್ಣು, ದವನಗಳನ್ನು ಎಸೆದ ಭಕ್ತಾದಿಗಳು ತಮ್ಮ ಹರಕೆಯನ್ನು ತೀರಿಸಿಕೊಂಡರು. ಪ್ರತಿ ವರ್ಷದಂತೆ ಈ ವರ್ಷವೂ ಹುಣ್ಣಿಮೆಯ ದಿವಸ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ರಥೋತ್ಸವದ ಮಾರನೇ ದಿನ ಸ್ವಾಮಿಗೆ ವಿಶೇಷ ಮುತ್ತಿನ ಪಲ್ಲಕ್ಕಿಯ ಮೆರವಣಿಗೆ ಏರ್ಪಡಿಸಲಾಗುತ್ತದೆ. ಇನ್ನು ಇಲ್ಲಿ ರಥೋತ್ಸವ ಎಳೆಯುವ ಮುನ್ನ ಗರುಡ ಪಕ್ಷಿ ಬಂದು ರಥದ ಮೇಲೆ ಮೂರು ಸುತ್ತು ಹಾಕಿ ಹೋಗುತ್ತದೆ ಎಂಬ ಪ್ರತೀತಿ ಕೂಡ ಇದೆ.