ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ ಎಎಸ್​ಐ ಮನೆಗೆ ನುಗ್ಗಿ ಶೂಟೌಟ್, ದರೋಡೆ: ಮೂರು ರಾಜ್ಯಗಳಲ್ಲಿ ಪೊಲೀಸರ ತಲಾಶ್​, ಆರೋಪಿಗಳ ಬಂಧನ - ಕಳ್ಳತನ

ಎಎಸ್​ಐ ನಾರಾಯಣಸ್ವಾಮಿ ಮನೆಗೆ ನುಗ್ಗಿ ಶೂಟೌಟ್ ಮಾಡಿ, ದರೋಡೆ ಮಾಡಿದ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

ಎಎಸ್​ಐ ಮನೆಗೆ ನುಗ್ಗಿ ಶೂಟೌಟ್ ಮಾಡಿ ದರೋಡೆ
ಎಎಸ್​ಐ ಮನೆಗೆ ನುಗ್ಗಿ ಶೂಟೌಟ್ ಮಾಡಿ ದರೋಡೆ

By

Published : Dec 1, 2022, 5:28 PM IST

Updated : Dec 1, 2022, 6:20 PM IST

ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ಎಎಸ್​ಐ ನಾರಾಯಣಸ್ವಾಮಿ ಅವರ ಮನೆಗೆ ನುಗ್ಗಿ ಶೂಟೌಟ್ ಮಾಡಿ, ದರೋಡೆ ನಡೆಸಲಾಗಿತ್ತು. ಈ ಪ್ರಕರಣದ ತನಿಖೆಯನ್ನು ನಡೆಸಿ ಜಾರ್ಖಂಡ್​ನಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೈದರ್​, ಆರಿಫ್, ಹ್ಯಾರಿಸ್ ಖಾನ್, ಜಮ್ ಶೀರ್ ಹಾಗೂ ವೀರ್ ಸಿಂಗ್ ಬಂಧಿತ ಆರೋಪಿಗಳಾಗಿದ್ದಾರೆ. ಸಿನಿಮೀಯ ರೀತಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ದೆಹಲಿ, ಡೆಹ್ರಾಡೂನ್, ಜಾರ್ಖಂಡ್​ನಲ್ಲಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ.

ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್

ಬಂಧಿತರಿಂದ 3 ನಾಡಬಂದೂಕು, ಒಂದು ಪಿಸ್ತೂಲ್, 46 ಜೀವಂತ ಬುಲೆಟ್​ಗಳು, 12.41 ಲಕ್ಷ ರೂಪಾಯಿ ಹಣ, 3.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ. ಒಂದು ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳು, ಒಂದು ಕಾರನ್ನು ಜಪ್ತಿ ಮಾಡಿದ್ದಾರೆ. ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಸ್ವತಃ ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಮಾಧ್ಯಮಗೋಷ್ಟಿಯಲ್ಲಿ ನಡೆಸಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ವಿವಿಧ ಅಪರಾಧ ಕೃತ್ಯಗಳಲ್ಲಿ 16 ಮಂದಿ ಬಂಧನ, 64 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

Last Updated : Dec 1, 2022, 6:20 PM IST

ABOUT THE AUTHOR

...view details