ಗೌರಿಬಿದನೂರು :ಗೌರಿಬಿದನೂರು ವೃತ್ತದ 3 ಠಾಣಾ ವ್ಯಾಪ್ತಿಯ ರೌಡಿಗಳ ಪರೇಡ್ ಮಾಡುವ ಮೂಲಕ ಮುಂಬರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ನೀಡಿದ್ದಾರೆ.
ಪರೇಡ್ ನಡೆಸಿ ರೌಡಿ ಶೀಟರ್ಗಳಿಗೆ ಎಚ್ಚರಿಕೆ ನೀಡಿದ ಸಿಪಿಐ ಶಶಿಧರ್.. ಓದಿ: ಗೋ ಹತ್ಯೆ ಪ್ರಕರಣ: ಬಂಧಿಸಲು ಹೋದ ಪೊಲೀಸರ ಮೇಲೆಯೇ ಗುಂಡಿನ ದಾಳಿ
ವೃತ್ತ ನಿರೀಕ್ಷಕರಾಗಿ ಕಳೆದ 1 ತಿಂಗಳ ಹಿಂದೆ ಆಗಮಿಸಿದ ಸಿಪಿಐ ಶಶಿಕುಮಾರ್ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈಗಾಗಲೇ ತಾಲೂಕಿನಲ್ಲಿ ಚಿರಪರಿಚಿತರಾಗಿದ್ದಾರೆ. ಇಂದು ಸಹ ತಾಲೂಕಿನ ರೌಡಿ ಹಿನ್ನೆಲೆವುಳ್ಳ ವ್ಯಕ್ತಿಗಳು ಯಾರಾದರೂ ಸಾರ್ವಜನಿಕರಿಗೆ ತೊಂದರೆ ಮಾಡುವುದಾಗಲಿ.
ಗಲಾಟೆ, ಗುಂಪು ಕಟ್ಟುವುದು, ರಾಜಕೀಯ ಮಾಡುವುದು ಕಂಡು ಬಂದಲ್ಲಿ ಅಂಥ ರೌಡಿಗಳ ಮೇಲೆ ನಿರ್ಧಾಕ್ಷಿಣ್ಯ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ನಡತೆ ಸರಿ ಇದ್ದರೆ, ಸಮಾಜದಲ್ಲಿ ನಿಮಗೆ ಒಳ್ಳೆ ಗೌರವ ಸಿಗಬೇಕೆಂದರೆ, ನಿಮ್ಮ ಮೇಲೆ ಇರುವ ರೌಡಿಪಟ್ಟಿ ತೆಗೆಯಬೇಕೆಂದರೆ, ಒಳ್ಳೆ ನಡತೆಯಿಂದ ಬಾಳಿ ಎಂದು ಕ್ಲಾಸ್ ತಗೆದುಕೊಂಡಿದ್ದಾರೆ. ಇನ್ನೂ ಹಲವಾರು ರೌಡಿಗಳ ಮೇಲೆ ಪೊಲೀಸ್ ನಿಗಾ ಇಟ್ಟಿದ್ದಾರೆ.
ಪೊಲೀಸರ ಕಣ್ಣು ನಿಮ್ಮ ಮೇಲೆ ಬೀಳದ ರೀತಿ ನಡೆದುಕೊಂಡು ಶಾಂತಿ ಸುವ್ಯವಸ್ಥೆ ಹಾಗೂ ಮಟ್ಕಾ ಇಸ್ಪೀಟ್ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದರೆ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗ್ರಾಮಾಂತರ ಠಾಣೆಯ ಪಿಎಸ್ಐ ಮೋಹನ್ ಕುಮಾರ್, ಮಂಚೇನಹಳ್ಳಿ ಠಾಣೆಯ ಪಿಎಸ್ಐ ಲಕ್ಷಿ ನಾರಾಯಣ ಹಾಗೂ ನಗರ ಠಾಣೆಯ ಪಿಎಸ್ಐ ಚಂದ್ರಕಲಾ ಹಾಗೂ 3 ಠಾಣಾ ಸಿಬ್ಬಂದಿ ಹಾಜರಿದ್ದರು.