ಚಿಕ್ಕಬಳ್ಳಾಪುರ: ಎಬಿವಿಪಿ ಸಂಘಟನೆಯ ಹೆಣ್ಣು ಮಕ್ಕಳ ಆತ್ಮರಕ್ಷಣೆ ಕಾರ್ಯಕ್ರಮಕ್ಕೆ ಚಿಂತಾಮಣಿ ತಾಲೂಕಿನ ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹಾಜರಾಗುವಂತೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಸಚಿವರು ನೀಡಿರುವ ಆದೇಶ ಖಂಡನೀಯ ಎಂದು ಎಸ್ಎಫ್ಐ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಬೆಂಗಳೂರು ಉತ್ತರ ವಿವಿ ಕುಲಸಚಿವರು ಎಬಿವಿಪಿಗೆ ಬೆಂಬಲ ನೀಡಿರುವುದು ಖಂಡನೀಯ - ಚಿಕ್ಕಬಳ್ಳಾಪುರ ಎಸ್ಎಫ್ಐ ಸಂಘಟನೆ ಸುದ್ದಿಗೋಷ್ಠಿ
ಚಿಂತಾಮಣಿ ತಾಲೂಕಿನ ಎಲ್ಲಾ ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಎಬಿವಿಪಿ ಸಂಘಟನೆಯ ಹೆಣ್ಣು ಮಕ್ಕಳ ಆತ್ಮರಕ್ಷಣೆ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಸಚಿವರು ನೀಡಿರುವ ಆದೇಶದ ವಿರುದ್ಧ ಎಸ್ಎಫ್ಐ ಸಂಘಟನೆ ವಿರೊಧ ವ್ಯಕ್ತಪಡಿಸಿದೆ.
![ಬೆಂಗಳೂರು ಉತ್ತರ ವಿವಿ ಕುಲಸಚಿವರು ಎಬಿವಿಪಿಗೆ ಬೆಂಬಲ ನೀಡಿರುವುದು ಖಂಡನೀಯ sfi-organization-opposite-to-abvp-organization-program](https://etvbharatimages.akamaized.net/etvbharat/prod-images/768-512-5905778-thumbnail-3x2-protest.jpg)
ಎಸ್ಎಫ್ಐ ಕಾರ್ಯಕರ್ತರ ಸುದ್ದಿಗೋಷ್ಠಿ
ಎಸ್ಎಫ್ಐ ಕಾರ್ಯಕರ್ತರ ಸುದ್ದಿಗೋಷ್ಠಿ
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯ ಅಧ್ಯಕ್ಷ ಅಂಬರೀಶ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಆಡಳಿತ ಅಧಿಕಾರಿಗಳು ಸಂಘಟನೆಗಳ ಏಜೆಂಟ್‌ಗಳಿಗೆ ಕೆಲಸ ಮಾಡುತ್ತಿದ್ದಾರೆ. ಕೋಮುವಾದಿ ಎಬಿವಿಪಿ ಸಂಘಟನೆ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ವಿದ್ಯಾರ್ಥಿಗಳು ಹಾಜರಾಗಬೇಕೆಂದು ಆದೇಶ ಮಾಡಿರುವುದು ಖಂಡನೀಯ ಎಂದು ಕಿಡಿಕಾರಿದರು.