ಚಿಕ್ಕಬಳ್ಳಾಪುರ:ರಸ್ತೆಗೆ ದಾಟುತ್ತಿದ್ದ ನಾಗರ ಹಾವಿಗೆ ಡಿಕ್ಕಿ ಹೊಡೆಯುವುನ್ನು ತಪ್ಪಿಸಲು ಚಾಲಕ ಮುಂದಾಗಿ ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ ನಡೆದಿದೆ. ಅಗಲಗುರ್ಕಿಯ ಹೆದ್ದಾರಿ 44 ರಲ್ಲಿ ಹಾವು ಸಂಚರಿಸುತ್ತಿರುವುದನ್ನು ಕಂಡ ಲಾರಿ ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾನೆ. ಇದೇ ಸಂದರ್ಭದಲ್ಲಿ ಹಿಂದಿನಿಂದ ಬರುತ್ತಿದ್ದ ಎರಡು ಕಂಟೈನರ್ ಲಾರಿ, ಟಾಟಾ ಏಸ್, ಕಾರು, ಒಂದು ಟಿಪ್ಪರ್ ಮಧ್ಯೆ ಸರಣಿ ಅಪಘಾತ ಸಂಭವಿಸಿತು.
ನಾಗರ ಹಾವು ರಕ್ಷಿಸಲು ಹೋಗಿ ದಿಢೀರ್ ಬ್ರೇಕ್ ಹಾಕಿದ ಲಾರಿ ಚಾಲಕ; ಸರಣಿ ಅಪಘಾತ!
ಚಿಕ್ಕಬಳ್ಳಾಪುರದ ಅಗಲಗುರ್ಕಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಾಗರಹಾವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಲಾರಿ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದು, ಇದರಿಂದ ಸರಣಿ ಅಪಘಾತ ಸಂಭವಿಸಿದೆ.
ನಾಗರ ಹಾವಿಗೆ ಡಿಕ್ಕಿ ಹೊಡೆಯವುದನ್ನು ತಪ್ಪಿಸಲು ಹೋಗಿ ಸರಣಿ ಅಪಘಾತ
ಅಪಘಾತದಲ್ಲಿ ಟಾಟಾ ಏಸ್ ಚಾಲಕನ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಹೆದ್ದಾರಿಯಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದ ಸಂಚಾರಿ ಠಾಣೆ ಪೊಲೀಸರ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ :ಕಲಬುರಗಿಯಲ್ಲಿ ಕಂಟೇನರ್ ಕಾರು ಮಧ್ಯೆ ಭೀಕರ ಅಪಘಾತ: ಸಿಪಿಐ ದಂಪತಿ ದುರ್ಮರಣ
Last Updated : Dec 7, 2022, 6:32 PM IST