ಚಿಕ್ಕಬಳ್ಳಾಪುರ:ಸರ್ವಜ್ಞ ಪ್ರಾಧಿಕಾರ ಮಂಡಳಿಗೆ ಕುಂಬಾರ ಸಮುದಾಯದ ಯಾವೊಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡದೆ, ಇಡೀ ಕುಂಬಾರ ಸಮುದಾಯವನ್ನು ಸರ್ಕಾರ ಕಡೆಗಣಿಸುತ್ತಿದೆ. ಆದಷ್ಟು ಬೇಗ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಹಶೀಲ್ದಾರ್‌ಗೆ ಮನವಿಯನ್ನು ಸಲ್ಲಿಸಲಾಯಿತು.
ಸರ್ವಜ್ಞ ಪ್ರಾಧಿಕಾರ ಮಂಡಳಿಗೆ ಕುಂಬಾರ ಸಮುದಾಯದ ಪ್ರತಿನಿಧಿ ಆಯ್ಕೆ ಮಾಡಲು ಮನವಿ - Sarvajna authority Board
ಸರ್ವಜ್ಞ ಪ್ರಾಧಿಕಾರ ಮಂಡಳಿಗೆ ಕುಂಬಾರ ಸಮುದಾಯದ ಪ್ರತಿನಿಧಿಯನ್ನು ಆದಷ್ಟು ಬೇಗ ಆಯ್ಕೆ ಮಾಡಿ ಎಂದು ಆಗ್ರಹಿಸಿ ಸಂಘದ ವತಿಯಿಂದ ಚಿಂತಾಮಣಿ ತಾಲೂಕಿನ ತಹಶೀಲ್ದಾರ್‌ಗೆ ಮನವಿಯನ್ನು ಸಲ್ಲಿಸಲಾಯಿತು.
2014-15 ಸಾಲಿನಲ್ಲಿ ಸರ್ವಜ್ಞ ಜಯಂತಿ ಆಚರಣೆ ಮಾಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಅನುಮತಿ ನೀಡಿತ್ತು. ಸರ್ವಜ್ಞ ಪ್ರಾಧಿಕಾರ ಮಂಡಳಿ ರಚನೆಯಾಗಬೇಕು ಎಂಬ ಮನವಿಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ ಪ್ರಾಧಿಕಾರಕ್ಕೆ ಕುಂಬಾರ ಸಮುದಾಯದ ಯಾವೊಬ್ಬ ಪ್ರತಿನಿಧಿಯನ್ನು ಆಯ್ಕೆ ಮಾಡದೆ, ಇಡೀ ಕುಂಬಾರ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ. ಈಗಲಾದರು ಸರ್ಕಾರ ಎಚ್ಚೆತ್ತುಕೊಂಡು ಆಯ್ಕೆ ಮಾಡುವಂತೆ ಆಗ್ರಹಿಸಿದರು.
ಅದೇ ರೀತಿ ಕೋವಿಡ್-19 ಲಾಕ್ಡೌನ್ ಸಂದರ್ಭದಲ್ಲಿ ಸಮುದಾಯಕ್ಕೆ ಐದು ಸಾವಿರ ಸಹಾಯಧನ ಘೋಷಣೆ ಮಾಡಿದ್ದು, ಇದುವರೆಗೂ ಯಾವುದೇ ಹಣ ಕೊಟ್ಟಿರುವುದಿಲ್ಲ. ಕುಂಬಾರ ಸಮುದಾಯವು ತುಂಬಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಸಹಾಯಧನ ನೀಡುವಂತೆ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ಥೆದಾರ್ಗೆ ಮನವಿ ಸಲ್ಲಿಸಲಾಯಿತು.